ವರದಿಗಾರ (ಅ.14) 2007ರಲ್ಲಿ ಗುಜರಾತ್ ಗಲಭೆಗೆ ವೇಳೆ ಜಾಮನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿ, ಆಸ್ಪತ್ರೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ರಾಘವಜಿ ಪಟೇಲ್ ಮತ್ತು ಇತರ ನಾಲ್ವರಿಗೆ ಗುಜರಾತ್ ನ್ಯಾಯಾಲಯವೊಂದು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಮಾತ್ರವಲ್ಲ ಪ್ರತಿಯೊಬ್ಬರಿಗೂ ತಲಾ 10 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. 2007ರಲ್ಲಿ ಈ ಧ್ವಂಸ ಘಟನೆ ನಡೆದಾಗ ಪಟೇಲ್ ಅವರು ಧ್ರೋಲ್ ಜೋದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. 2017ರಲ್ಲಿ ಅವರು ಬಿಜೆಪಿ ಸೇರಿದ್ದು, ಈಗ ಅವರು ಜಾಮ್ ನಗರ (ಗ್ರಾಮೀಣ) ಕ್ಷೇತ್ರದ ಶಾಸಕರಾಗಿದ್ದಾರೆ.
