ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಝಮಾನ್ ಬಾಯ್ಸ್ ಕಲ್ಲಡ್ಕ ಬ್ಲಡ್ ಡೋನರ್ಸ್ ಮಂಗಳೂರು (ರಿ) ಹಾಗೂ ಲತೀಫಾ ಆಸ್ಪತ್ರೆ ಹೂದ್ ಮೆಹ್ತಾ ಸಹಯೋಗದಲ್ಲಿ ದುಬೈಯಲ್ಲಿ 250ನೇ ಯಶಸ್ವಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕೇಶ್ ಕುಮಾರ್ ನಾಯರ್ ಮ್ಯಾನೇಜರ್ ಐ.ಟಿ.ಮೆಡಿಕೇರ್ ಆಸ್ಪತ್ರೆ ದುಬೈ ವಹಿಸಿದರು.
ರಕ್ತದಾನ ಶಿಬಿರವನ್ನು ಉದ್ಘಾಟನೆಯನ್ನು ಬದ್ರುದ್ದೀನ್ ಎಂತಾರ್ ಕಾರ್ಯದರ್ಶಿ ಸ್ಟೇಟ್ ಝೋನ್ ದಾರುನ್ನೂರು ಎಜುಕೇಷನ್ ವಹಿಸಿದರು.
ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಬ್ಲಡ್ ಡೋನರ್ಸ್ ಫೋರ್ ಯು ಇದರ ಮುಖ್ಯ ಕಾರ್ಯನಿರ್ವಾಹಕರಾದ ಮಾನವ್, ಡಿ.ಕೆ.ಎಸ್.ಸಿ. ಯೂತ್ ವಿಂಗ್ ವಲಯ ಅಧ್ಯಕ್ಷರಾದ ಸಮದ್ ಬಿರಾಲಿ, ಝಮಾನ್ ಬೋಯ್ಸ್ ಕಲ್ಲಡ್ಕ ಇದರ ಸದಸ್ಯರಾದ ಕೆ.ಕೆ.ಸಯೀದ್,ಫಯಾಝ್ ಕಲ್ಲಡ್ಕ,ನೌಫಲ್ ಬೋಗೋಡಿ,ಝಮೀರ್ ಕಲ್ಲಡ್ಕ,ರವೂಫ್ ಕಲ್ಲಡ್ಕ, ಬದ್ರಿಯಾ ಫ್ರೆಂಡ್ಸ್ ಸದಸ್ಯರಾದ ಇರ್ಷಾದ್ ಓರಿಯನ್,ಅಬ್ದುಲ್ ರಹ್ಮಾನ್ ಓರಿಯಾನ್, ನವಾಝ್ ಸಜೀಪ,ಮೊಹಮ್ಮದ್ ಅಲ್ತಾಫ್ ಬಿಕರ್ಣಕಟ್ಟೆ, ಇಲ್ಯಾಸ್ ಕಂದಕ್,ಆಸೀಫ್ ಬೆಂಗರೆ, ಬ್ರಿಸ್ಟಾರ್ ಮೊಬೈಲ್ ಇದರ ಸಾದಿಕ್ ಉಳ್ಳಾಲ್ ಹಾಗೂ ಬಿಡಿಎಂ ಸದಸ್ಯರಾದ ಅರ್ಶಾದ್ ಬಾಂಬಿಲ,ಕೆ.ಕೆ.ಜಬ್ಬಾರ್, ಸಾದಿಕ್ ಪುತ್ತೂರು, ಅನ್ವಾರ್ ಸಾದತ್,ಮಹಿಳಾ ವಿಭಾಗದ ಸದಸ್ಯೆ ನಿದಾ ಮುಶೀರ್ ಶೇಕ್ ಇವರು ಉಪಸ್ಥಿತರಿದ್ದರು.
250 ನೇ ರಕ್ತದಾನ ಶಿಬಿರದಲ್ಲಿ 86 ರಕ್ತದಾನಿಗಳು ಕೋವಿಡ್ ಸಂಧರ್ಭದಲ್ಲಿ ಕೂಡ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಸ್ವಯಂ ರಕ್ತದಾನ ಮಾಡಿದರು… ರಕ್ತದಾನ ಶಿಬಿರದಲ್ಲಿ ಅನಿವಾಸಿ ಭಾರತೀಯ ಮಹಿಳೆ ರಕ್ತದಾನ ಮಾಡಿದ್ದು ಈ ರಕ್ತದಾನ ಶಿಬಿರದ ವಿಶೇಷ ಆಕರ್ಷಣೆ ಆಗಿತ್ತು.
ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. 250ನೇ ರಕ್ತದಾನ ಶಿಬಿರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಪರವಾಗಿ ಬ್ಲಡ್ ಡೋನರ್ಸ್ ಫೋರ್ ಯು,ದಾರುನ್ನೂರು ಎಜುಕೇಷನ್ ಕಾಶೀಪಟ್ನಾ ,ಕೆ.ಎಸ್.ಸಿ.ಸಿ ದುಬೈ, ಅಬುದಾಬಿ ಕಾಸ್ರೋಟ್ಟಾರ್ ಅಬುದಾಬಿ,ಡಿ.ಕೆ.ಎಸ್.ಸಿ.ಯೂತ್ ವಿಂಗ್,ಲತೀಫಾ ಆಸ್ಪತ್ರೆ ಬ್ಲಡ್ ಬ್ಯಾಂಕ್, ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಹಾಗೂ ಝಮಾನ್ ಬೋಯ್ಸ್ ಕಲ್ಲಡ್ಕ ಇವರಿಗೆ ಬಿಡಿಎಮ್ ಸಂಸ್ಥೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.
