ರಾಷ್ಟ್ರೀಯ ಸುದ್ದಿ

ದಲಿತ ವ್ಯಕ್ತಿಯನ್ನು ಕಾಲಿಗೆ ಬಿದ್ದು ಕ್ಷಮೆಯಾಚಿಸುವಂತೆ ಮಾಡಿ ಚಿತ್ರೀಕರಿಸಿದ ತೇವರ್ ಸಮುದಾಯದ ಏಳು ಮಂದಿಯ ಸೆರೆ

ವರದಿಗಾರ (ಅ.13) ದಲಿತ ಕುರಿಗಾರಿಯೊಬ್ಬರನ್ನು ತನ್ನ ಕಾಲಿಗೆ ಬೀಳುವಂತೆ ಒತ್ತಾಯಿಸಿ, ಕ್ಷಮೆಯಾಚಿಸುವಂತೆ ಮಾಡಿ, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಜಾತಿಯ ತೇವರ್ ಸಮುದಾಯಕ್ಕೆ ಸೇರಿದ ಏಳು ಮಂದಿ ಆರೋಪಿಗಳನ್ನು ತಮಿಳುನಾಡಿನ ತೂತುಕುಡಿ ಬಂಧಿಸಿದ್ದಾರೆ. ಈ ಘಟನೆ ಅಕ್ಟೋಬರ್ 8 ರಂದು ನಡೆದಿದ್ದರೂ, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ದಿ ನ್ಯೂಸ್ ಮಿನಿಟ್.ಕಾಂ ವರದಿ ಮಾಡಿದೆ.

ಜಾತಿ ಆಧಾರಿತ ದೌರ್ಜನ್ಯಗಳು ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ತಮಿಳುನಾಡಿನಲ್ಲಿಯೂ ನಡೆಯುತ್ತವೆ ಎಂದು ಈ ಕುರಿತ 10 ಸೆಕೆಂಡುಗಳ ವಿಡಿಯೋವನ್ನು ಸಂಸದ ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ಥೋಲ್ ತಿರುಮಾವಲವನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆದ ನಂತರ, ಸಂತ್ರಸ್ತನನ್ನು ತೂತುಕುಡಿ ಜಿಲ್ಲೆಯ ಕಾಯತಾರ್ ತಾಲ್ಲೂಕಿನ ಹಳ್ಳಿಯ ನಿವಾಸಿ 60 ವರ್ಷದ ಪೌಲ್ ರಾಜ್ ಎಂದು ಗುರುತಿಸಲಾಗಿದೆ. ಅವರು ಸುಮಾರು 100 ಆಡು ಮತ್ತು ಕುರಿಗಳನ್ನು ಮೇಯಿಸುತ್ತಿದ್ದು, ಅವುಗಳೆ ಅವರಿಗೆ ಜೀವನಾಧಾರವಾಗಿದೆ.

ಒಂದು ದಿನ ಆಡು ಮೇಯಿಸುತ್ತಿದ್ದಾಗ ಒಂದು ಆಡು ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಸಂಗಿಲಿ ಥೇವರ್ ಎಂಬವರ ಹಿಂಡಿಗೆ ಹೋಗಿದೆ. ಇದರಿಂದ ಸಂಗಿಲಿ ತೇವರ್‌ ಆಕ್ರೋಶಗೊಂಡು, ಪೌಲ್ ರಾಜ್ ನ ಜಾತಿ ಹೆಸರು ಕರೆದು ನಿಂದಿಸಿದ್ದಾನೆ. ಮಾತ್ರವಲ್ಲ ಸಂಗಿಲಿ ತೇವರ್ ಹಳ್ಳಿಗೆ ಹೋಗಿ ತನ್ನ ಸಂಬಂಧಿಕರಾದ ಪೆರಿಯಮರಿ, ಮಹೇಂದ್ರನ್, ಮಹಾರಾಜನ್, ಉದಯಮ್ಮಲ್ ಮತ್ತು ವೀರಯ್ಯ ಎಂಬವರನ್ನು ಕರೆತಂದು, ಪೌಲ್ ರಾಜ್ ನನ್ನು ಅವಮಾನಿಸಿದ್ದಾರೆ. ಈ ವೇಳೆ ಅಲ್ಲಿದ್ದವರು ಸಂಗಿಲಿ ಥೇವರ್ ಅವರ ಪಾದಕ್ಕೆ ಬೀಳುವಂತೆ ಮಾಡಿ ಕ್ಷಮೆಯಾಚಿಸಿ ಅದರ ವಿಡಿಯೋ ಮಾಡಿದ್ದಾರೆ ಎಂದು ಪೌಲ್ ರಾಜ್ ಆರೋಪಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತೂತುಕುಡಿಯ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಕೋವಿಲ್ಪಟ್ಟಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group