ವರದಿಗಾರ (ಅ.11) ನಮ್ಮ ದೇಶದ ಸೈನಿಕರನ್ನು ಗುಂಡು ನಿರೋಧಕವಲ್ಲದ ಟ್ರಕ್ಗಳಲ್ಲಿ ಕಳುಹಿಸಿ ಅವರು ಹುತಾತ್ಮರಾಗಲು ಕಾರಣವಾಗುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರವು ಪ್ರಧಾನಿಗಾಗಿ 8,400 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ವಿವಿಐಪಿ ಬೋಯಿಂಗ್ ವಿಮಾನ ಖರೀದಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
“ನಮ್ಮ ಯೋಧರನ್ನು ಗುಂಡು ನಿರೋಧಕವಲ್ಲದ ಟ್ರಕ್ ಗಳಲ್ಲಿ ಹುತಾತ್ಮರಾಗಲು ಕಳುಹಿಸಲಾಗುತ್ತಿದೆ ಮತ್ತು 8,400 ಕೋಟಿ ರೂ. ವಿಮಾನವನ್ನು ಪ್ರಧಾನಮಂತ್ರಿಗಾಗಿ ವ್ಯಯಿಸಲಾಗಿದೆ. ಇದು ನ್ಯಾಯವೇ? ” ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಗುಂಡು ನಿರೋಧಕವಲ್ಲದ ಟ್ರಕ್ನಲ್ಲಿ ಕೆಲವು ಸೈನಿಕರು ಹೋಗುತ್ತಿರುವ ವಿಡಿಯೋವನ್ನು ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
