ರಾಷ್ಟ್ರೀಯ ಸುದ್ದಿ

ಬಿಹಾರದ ಶೇಕಡಾ 36ರಷ್ಟು ಜನಪ್ರತಿನಿಧಿಗಳ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿ

ವರದಿಗಾರ (ಅ.10): 2005 ರಿಂದ ಚುನಾಯಿತರಾದ ಬಿಹಾರದ 820 ಸಂಸದರು ಮತ್ತು ಶಾಸಕರ ಪೈಕಿ ಮೂರನೇ ಒಂದರಷ್ಟು ಅಥವಾ 295 ಮಂದಿಯ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಹಿಳೆಯರ ಮೇಲಿನ ಅಪರಾಧಗಳು, ಕೊಲೆ, ಹಲ್ಲೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿವೆ ಎಂದು ಶಾಸಕರ ಚುನಾವಣಾ ಪ್ರಮಾಣಪತ್ರವನ್ನು ವಿಶ್ಲೇಷಿಸಿರುವ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

ಈ ಶಾಸಕರಲ್ಲಿ 84 ಮಂದಿ ಬಿಜೆಪಿ ಟಿಕೆಟ್‌ನಲ್ಲಿ, 101 ಜೆಡಿ (ಯು) ಟಿಕೆಟ್‌ನಲ್ಲಿ, 62 ಮಂದಿ ಆರ್‌ಜೆಡಿ ಟಿಕೆಟ್ ನಿಂದ ಗೆದ್ದಿದ್ದಾರೆ. 17 ಮಂದಿಯನ್ನು ಕಾಂಗ್ರೆಸ್ ಮತ್ತು 11 ಮಂದಿಯನ್ನು ಎಲ್‌ಜೆಪಿ ಆಯ್ಕೆ ಮಾಡಿದೆ.

ಎಲ್ ಜೆಪಿ ಅತಿ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳ ಶಾಸಕರನ್ನು ಹೊಂದಿದೆ (2005 ರಿಂದ 27 ಎಂಪಿಎಸ್ / ಶಾಸಕರಲ್ಲಿ ಶೇಕಡಾ 11ರಷ್ಟು). ಇದರ ನಂತರ ಆರ್‌ಜೆಡಿ (ಶೇ. 39; 158 ರಲ್ಲಿ 62) ಮತ್ತು ಕಾಂಗ್ರೆಸ್ (ಶೇ.37ರಷ್ಟು; 46 ರಲ್ಲಿ 17). ಜೆಡಿಯು ಮತ್ತು ಬಿಜೆಪಿಯಲ್ಲಿ ಬಿಹಾರದ ಶೇ 34 ರಷ್ಟು ಸಂಸದರು ಮತ್ತು ಶಾಸಕರು ಕ್ರಿಮಿನಲ್ ಹಿನ್ನೆಲೆಯವರು ಇದ್ದಾರೆ.

ಈ ಚುನಾಯಿತ ಪ್ರತಿನಿಧಿಗಳ ಸ್ವತ್ತುಗಳ ಬಗ್ಗೆ, ಎಡಿಆರ್ ವರದಿ ಹೀಗೆ ಹೇಳುತ್ತದೆ: “ರಾಷ್ಟ್ರೀಯ ಪಕ್ಷಗಳಲ್ಲಿ, 2005 ರಿಂದ ಕಾಂಗ್ರೆಸ್ನಿಂದ 46 ಸಂಸದರು / ಶಾಸಕರ ಸರಾಸರಿ ಆಸ್ತಿ 4.04 ಕೋಟಿ ರೂ., 246 ಬಿಜೆಪಿ ಸಂಸದರು / ಶಾಸಕರದ್ದು ಸರಾಸರಿ 2.92 ಕೋಟಿ ರೂ. ಆಗಿದೆ. 296 ಜೆಡಿಯು ಸಂಸದರು / ಶಾಸಕರ ಸರಾಸರಿ ಆಸ್ತಿ 1.42 ಕೋಟಿ ರೂ., 158 ಆರ್‌ಜೆಡಿ ಸಂಸದರು / ಶಾಸಕರ ಸರಾಸರಿ ಆಸ್ತಿ 2.14 ಕೋಟಿ ರೂ., ಮತ್ತು 21 ಪಕ್ಷೇತರ ಸಂಸದರು / ಶಾಸಕರ ಸರಾಸರಿ ಆಸ್ತಿ 3.05 ಕೋಟಿ ರೂ.ಇದೆ ಎಂದು ವರದಿ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group