ವರದಿಗಾರ (ಅ.9): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ?. ಇವರೇನು ಜಾತಿ ರಕ್ಷಕರೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಆರ್.ಆರ್.ನಗರ ಉಪ ಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಶಿವಕುಮಾರ್ ಜಾತಿರಾಜಕಾರಣ ಆರಂಭಿಸಿದ್ದಾರೆ. ಹಿಂದೆ ಜಾತಿ ಮೇಲೆ ದಬ್ಬಾಳಿಕೆಯಾದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಜಾತಿಯವರೆಲ್ಲ ಒಂದಾಗಬೇಕು. ನಮ್ಮವರಿಗೆ ತೊಂದರೆ ಕೊಡುತ್ತಾರೆ ಎನ್ನುವುದೆಷ್ಟು ಸರಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದೆಂದು ಹೇಳುತ್ತಿರುವ ಶಿವಕುಮಾರ್ಗೆ ಈಗ ಜ್ಞಾನೋದಯವಾದಂತಿದೆ. ಮೊದಲೇ ಇವೆಲ್ಲ ತಿಳಿದಿರಲಿಲ್ಲವೇ ?. ಇಂತಹ ವಾತಾವರಣ ಯಾವಾಗ ಸೃಷ್ಟಿಯಾಯಿತು?. ಯಾರು ಬೆಂಬಲ ಕೊಡುತ್ತಾ ಬಂದರು ಎನ್ನುವುದನ್ನು ಹೇಳಬೇಕು. ಚುನಾವಣೆಗಾಗಿ ಈಗ ಮಾತನಾಡುತ್ತಿರುವ ಅವರು ಮುನಿರತ್ನ ಕಾಂಗ್ರೆಸ್ನಲ್ಲಿದ್ದಾಗ ಏಕೆ ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
