ಜಿಲ್ಲಾ ಸುದ್ದಿ

ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಯುವ ಮೋರ್ಚಾದ ರಾಲಿಯನ್ನು ನಿಷೇಧಿಸಿ : ಎಸ್ ಡಿ ಪಿ ಐ

ವರದಿಗಾರ ಮಂಗಳೂರು : ಸೆಪ್ಟಂಬರ್ 7 ರಂದು ಬಿಜೆಪಿ ಯುವ ಮೋರ್ಚಾ ಮಂಗಳೂರಿನಲ್ಲಿ ಹೊರ ಜಿಲ್ಲೆಗಳಿಂದ ಜನರನ್ನು ಬೈಕ್ ರ್ಯಾಲಿಗಳ ಮೂಲಕ ಕರೆಸಿ ನಡೆಸಲುದ್ದೇಶಿಸಿರುವ “ಮಂಗಳೂರು ಚಲೋ”ಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಬಿಜೆಪಿ ಯುವ ಮೋರ್ಚಾದ ಬೈಕ್ ರ್ಯಾಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಿಂದ ಬಂದು ಮಂಗಳೂರಿನಲ್ಲಿ ಸಮಾವೇಶ ನಡೆಯುತ್ತದೆ ಎಂದು ಅದರ ಸಂಘಟಕರು ತಿಳಿಸಿರುವರು. ಆದರೆ ಕಳೆದ ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ಚೂರಿ ಹಾಕಿದ ಘಟನೆಯಿಂದ ಹಿಡಿದು ಹಲವು ದುಷ್ಕೃತ್ಯಗಳ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರ ನಡೆಸುತ್ತಲೇ ಬಂದಿರುವ ಸಂಘ ಪರಿವಾರ ಸಂಘಟನೆಗಳು ಇದಕ್ಕೆ ಪೂರಕವಾಗಿ ಅಶ್ರಫ್ ಕಲಾಯಿಯವರನ್ನು ಹಾಡುಹಗಲೇ ಬರ್ಬರವಾಗಿ ಕೊಂದು ಹಾಕಿ ತಮ್ಮ ರಕ್ತದಾಹವನ್ನು ತೀರಿಸಿತು. ಅದರ ನಂತರ ಶರತ್ ಶವಯಾತ್ರೆಯ ಸಂದರ್ಭದಲ್ಲೂ ಸಂಘಪರಿವಾರದ ನಾಯಕರೇ ಖುದ್ದಾಗಿ ನೇತೃತ್ವ ನೀಡಿ ಶವಯಾತ್ರೆಯ ಉದ್ದಕ್ಕೂ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲೆಸೆಯುತ್ತಾ, ವಾಹನಗಳನ್ನು ಜಖಂಗೊಳಿಸುತ್ತಾ ಎದುರು ಸಿಕ್ಕವರಿಗೆಲ್ಲಾ ಹಲ್ಲೆ ನಡೆಸುತ್ತಾ ಕ್ರೌರ್ಯವನ್ನು ನಡೆಸಿ ಜಿಲ್ಲೆಯಲ್ಲಿ ಸಂಪೂರ್ಣ ಅಶಾಂತಿಯನ್ನು ಸೃಷ್ಟಿಸಿದ್ದಾರೆ . ಈ ಘಟನೆಯ ಕುರಿತು ಸಂಘಪರಿವಾರದ ಐವರು ನಾಯಕರ ಮೇಲೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೈಕೋರ್ಟಿನಲ್ಲಿ ಅದರ ವಿಚಾರಣೆ ನಡೆಯುತ್ತಿದೆ.

ಸಂಘಪರಿವಾರ ಜಿಲ್ಲೆಯಲ್ಲಿ ನಡೆಸಲುದ್ದೇಶಿಸಿದ್ದ ಅಶಾಂತಿಯ ವಾತಾವರಣ ಪೊಲೀಸರ ದಕ್ಷ ಕ್ರಮಗಳಿಂದಾಗಿ ವಿಫಲವಾಗಿತ್ತು. ಅದಲ್ಲದೆ ಬಹಳಷ್ಟು ಷಡ್ಯಂತರಗಳ ಮೂಲಕ ಜಿಲ್ಲೆಯಲ್ಲಿ ಗಲಭೆಗೆ ಮುನ್ನುಡಿ ಹಾಕಿ ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವ ತಂತ್ರಗಾರಿಕೆಯೂ ಇದರ ಹಿಂದಿದೆ. ತಮ್ಮ ರಾಜಕೀಯ ಲಾಭಕ್ಕೋಸ್ಕರ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಇಲಾಖೆಗೆ 23 ಕೊಲೆಯ ಸುಳ್ಳು ವರದಿಯ ಪಟ್ಟಿಯನ್ನು ರವಾನಿಸಿ ಮುಜುಗರಕ್ಕೀಡಾದ ಅದೇ ಪಟ್ಟಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಯುವ ಮೋರ್ಚಾ ಈ ರ್ಯಾಲಿ ನಡೆಸುತ್ತಿದೆ.ಅದೇ ರೀತಿ ಎಸ್ಡಿಪಿಐ ಪಕ್ಷದ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ತಯಾರಿಸಿ ಆ ಮೂಲಕ ಜನರನ್ನು ಉದ್ರೇಕಿಸುವಂತಹ,ಪ್ರಚೋದಿಸುವಂತಹ ಕೆಲಸ ಬಿಜೆಪಿ ಯುವ ಮೋರ್ಚಾ ಮಾಡುತ್ತಿದೆ.
ಕರಾವಳಿಯಲ್ಲಿ ಕಳೆದ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಬಹಳಷ್ಟು ರಕ್ತಪಾತಗಳನ್ನು ನಡೆಸಿದೆ 23 ಮುಸಲ್ಮಾನರನ್ನು ಮಾತ್ರವಲ್ಲದೆ 13 ಮಂದಿ ಅಮಾಯಕ ಹಿಂದುಗಳನ್ನು(ವಿನಾಯಕ ಬಾಳಿಗ, ಪ್ರವೀಣ್ ಪೂಜಾರಿ,ಹರೀಶ್ ಪೂಜಾರಿ,ಪ್ರತಾಪ್ ಮರೋಳಿ,ಕೃಷ್ಣಯ್ಯ ಪಾಟಾಳಿ,ಭಾಸ್ಕರ್ ಕುಂಭ್ಳೆ,ಶ್ರೀನಿವಾಸ್ ಬಜಾಲ್,ಹರೀಶ್ ಭಂಡಾರಿ ಕುಳಾಯಿ,ಶಿವರಾಜ್ ಕೋಡಿಕೆರೆ,ಪ್ರಕಾಶ್ ಕುಳಾಯಿ,ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್, ಕೇಶವ ಪೂಜಾರಿ ಸೂರಿಂಜೆ)ಬರ್ಬರವಾಗಿ ಹತೈಗೈದಂತಹ ಸಂಘಪರಿವಾರ ಮತ್ತು ಬಿಜೆಪಿಗೆ ಯಾವ ನೈತಿಕತೆ ಇದೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು. ರಾಜಕೀಯ ಲಾಭಕ್ಕಾಗಿ ಮತ್ತು ಅವರ ಸಿದ್ಧಾಂತವನ್ನು ವಿರೋಧಿಸುವ ಯಾರನ್ನು ಬೇಕಾದರೂ ಹತೈಗೈಯುವ ಬಿಜೆಪಿ ಮತ್ತು ಸಂಘಪರಿವಾರದಿಂದ ಜನರು ದೂರ ಹೋಗುವ ಸಂದರ್ಭದಲ್ಲಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಮತ್ತೆ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಅಮಾಯಕರ ರಕ್ತ ಹೀರುಲು ಯುವ ಮೋರ್ಚಾ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ, ,ಮೈಸೂರು ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳಿಕೆಗಳನ್ನು, ಆರೋಪಗಳನ್ನು ನೀಡಿ ಪ್ರಚೋಧನಾತ್ಮಕ ಭಾಷಣಗಳನ್ನು ಮಾಡಿ ಜಿಲ್ಲೆಯ ಮತ್ತು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ.ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕೆಂದು ಎಸ್ಡಿಪಿಐ ಆಗ್ರಹಿಸುತ್ತದೆ.
ಹಲವು ತಿಂಗಳುಗಳ ಕಾಲ ನಿಷೇದಾಜ್ಞೆಯೊಂದಿಗೆ ಕಷ್ಟಕರ ಜೀವನವನ್ನು ಕಳೆದ ಜಿಲ್ಲೆಯ ಜನತೆ ಮತ್ತೊಮ್ಮೆಅದನ್ನು ಬಯಸಲಾರರು. ಆದುದರಿಂದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಸಹಜ ಸ್ಥಿತಿಗೆ ಬಂದಿರುವ ಜಿಲ್ಲೆಯ ಶಾಂತಿಯನ್ನು ಕದಡುವ ಬಿಜೆಪಿ ಯುವ ಮೋರ್ಚಾದ ಯಾವ ಕಾರ್ಯಕ್ರಮಕ್ಕೂ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಪರಿಸ್ಥಿತಿಯನ್ನು ಅರ್ಥೈಸದೆ ಇದಕ್ಕೆ ಅನುಮತಿ ನೀಡಿದರೆ ಈ ಮೂಲಕ ಉಂಟಾಗುವ ಎಲ್ಲಾ ಅನಾಹುತಗಳಿಗೆ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗುತ್ತದೆ ಎಂದು ನಾವು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

ಪತ್ರಿಕಾಗೋಷ್ಟಿಯಲ್ಲಿ ಹನೀಫ್ ಖಾನ್ ಕೊಡಾಜೆ, ಜಿಲ್ಲಾಧ್ಯಕ್ಷರು ಎಸ್ಡಿಪಿಐ ದ.ಕ, ಅಥಾವುಲ್ಲಾ ಎ.ಎಮ್, ಪ್ರ. ಕಾರ್ಯದರ್ಶಿ ಎಸ್ಡಿಪಿಐ ದ.ಕ ಜಿಲ್ಲೆ, ಇಕ್ಬಾಲ್ ಬೆಳ್ಳಾರೆ , ಕಾರ್ಯದರ್ಶಿ ಎಸ್ಡಿಪಿಐ ದ.ಕ ಜಿಲ್ಲೆ,  ಇಕ್ಬಾಲ್ ಗೂಡಿನಬಳಿ,  ಕೋಶಾಧಿಕಾರಿ ಎಸ್ಡಿಪಿಐ ದ.ಕ ಜಿಲ್ಲೆ , ಶಾಹುಲ್ ಹಮೀದ್ , ಸದಸ್ಯರು ಎಸ್ಡಿಪಿಐ ದ.ಕ ಜಿಲ್ಲೆ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group