ವರದಿಗಾರ (ಅ.8): ಹತ್ರಾಸ್ ಸಂತ್ರಸ್ತೆಗೆ ಬೆಂಬಲ ಸೂಚಿಸಿ, ಕುಟುಂಬಕ್ಕೆ ಸಾಂತ್ವನ ಹೇಳಲು ಬರುವವರಿಗೆ ಮೇಲ್ಜಾತಿಯವರು ಬೆದರಿಕೆ ಹಾಕುತ್ತಿರುವುದು ಮುಂದುವರಿದಿದೆ.
ಸಂತ್ರಸ್ತ ಕುಟುಂಬದ ಮನೆಯ ಸಮೀಪದಲ್ಲೇ ರಾಷ್ಟ್ರೀಯ ಸವರ್ಣ ಪರಿಷತ್ ಮುಖ್ಯಸ್ಥ ಪಂಕಜ್ ಧಾವರಯ್ಯ ಎಂಬಾತ ಕುಳಿತು ಅಲ್ಲಿಗೆ ಬರುವವರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾನೆ.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಇತ್ತೀಚೆಗೆ ಹತ್ರಾಸ್ ಗೆ ಬಂದಾಗಲೂ ಈತ ಬಹಿರಂಗ ಬೆದರಿಕೆ ಹಾಕಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರ ಕಣ್ಣೆದುರೇ ಈ ಘಟನೆ ನಡೆಯುತ್ತಿದ್ದರೂ ಪೊಲೀಸರು ಜಾಣಮೌನ ವಹಿಸುತ್ತಿದ್ದಾರೆ.
ಹತ್ರಾಸ್ ಗೆ ಬರುವ ರಾಜಕಾರಣಿಗಳೇ ನಿಮಗೆ ಎಚ್ಚರಿಕೆ, “ಹತ್ರಾಸ್ ಗೆ ಬಂದರೆ ತಲೆ ಒಡೆದು, ವಾಹನವನ್ನು ಧ್ವಂಸಗೊಳಿಸದೆ ಹೊರಗೆ ಹೋಗಲು ಬಿಡುವುದಿಲ್ಲ, ಇದು ನನ್ನ ಬೆದರಿಕೆ ಎಂದು ವಿಡಿಯೋ ಮೂಲಕ ಬಹಿರಂಗ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದುವರೆಗೆ ಪೊಲೀಸರು ಈತನ ವಿರುದ್ಧ ಕ್ರಮಕೈಗೊಂಡಿಲ್ಲ.
