ರಾಷ್ಟ್ರೀಯ ಸುದ್ದಿ

ಹತ್ರಾಸ್ ಗೆ ಹೋಗುತ್ತಿದ್ದಾಗ ಬಂಧಿಸಲ್ಪಟ್ಟ ಪತ್ರಕರ್ತ ಸೇರಿ ನಾಲ್ವರ ವಿರುದ್ಧ ದೇಶದ್ರೋಹ, ಯುಎಪಿಎಯಡಿ ಪ್ರಕರಣ ದಾಖಲು; 14 ದಿನ ನ್ಯಾಯಾಂಗ ಬಂಧನ

ವರದಿಗಾರ (ಅ.8): ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಲು ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾದ ಓರ್ವ ಪತ್ರಕರ್ತ ಸೇರಿ ಇತರ ಮೂವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಬುಧವಾರ ದೇಶದ್ರೋಹ ಮತ್ತು ಯುಎಪಿಎ ಸೇರಿದಂತೆ ವಿವಿಧ ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಮಥುರಾದಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ವರನ್ನು ಬಂಧನದಲ್ಲಿಡಲಾಗಿದ್ದು, ಆದರೆ ಅವರ ವಿರುದ್ಧ ಇಂದು ಮಥುರಾದ ಮಂತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮುಜಫ್ಫರ್ ನಗರದ ಅತೀಕುರ್ರಹ್ಮಾನ್, ಕೇರಳದ ಮಲಪ್ಪುರಂನ ಸಿದ್ದೀಕ್, ಬಹ್ರೈಚ್‌ ನಿವಾಸಿ ಮಸೂದ್ ಮತ್ತು ರಾಂಪುರ ನಿವಾಸಿ ಆಲಂ ಬಂಧನಕ್ಕೊಳಗಾದವರು. ಈ ಪೈಕಿ ಸಿದ್ದೀಕ್ ಅವರು ಪತ್ರಕರ್ತರಾಗಿದ್ದಾರೆ.

ಸೋಮವಾರ ರಾತ್ರಿ ಅವರು ಹತ್ರಾಸ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಬಂಧಿಸಲಾಗಿದ್ದು, ಅವರ ಬಳಿಯಿಂದ ಲ್ಯಾಪ್‌ಟಾಪ್ ಮತ್ತು ‘ಜಸ್ಟೀಸ್ ಫಾರ್ ಹತ್ರಾಸ್ ವಿಕ್ಟಿಮ್‌’ ಎಂಬ ಬರಹಗಳುಳ್ಳ ಪೋಸ್ಟರ್ ಮತ್ತಿತರ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ವಿದ್ಯಾರ್ಥಿ ವಿಭಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ದೆಹಲಿಯಿಂದ ಕಾರಿನಲ್ಲಿ ಹತ್ರಾಸ್ ಗೆ ಹೋಗುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಾಲ್ವರ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ನಾಲ್ವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಮಥುರಾ ಗ್ರಾಮೀಣ ಪೊಲೀಸ್ ಅಧೀಕ್ಷಕ (ಎಸ್‌ಪಿ) ಶೀರಿಶ್ ಚಾಂದ್ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group