ವರದಿಗಾರ (ಅ.7): ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿ, ಅದನ್ನು ಉಲ್ಲಂಘಿಸುವವರಿಗೆ 1000 ದಂಡ ವಿಧಿಸಿತ್ತು. ಆದರೆ ಇದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಕಡಿಮೆಗೊಳಿಸಿದೆ.
ಹೊಸ ನಿಯಮದಂತೆ ನಗರ ಪ್ರದೇಶಗಳಲ್ಲಿ 1000 ದಂಡದ ಮೊತ್ತವನ್ನು 250 ರೂಪಾಯಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಯಿಂದ 100 ರೂಪಾಯಿಗೆ ಇಳಿಸಿದೆ. ಈ ಅದೇಶ ತಕ್ಷಣಕ್ಕೆ ಜಾರಿಯಾಗುವಂತೆ ಅದೇಶ ನೀಡಿದೆ.
ಸರ್ಕಾರ ಕೊರೋನಾ ಹೆಸರಿನಲ್ಲಿ ಲೂಟಿಗಿಳಿದಿದೆ ಎಂದು ಸಾರ್ವಜನಿಕರ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದರು. ಕೊರೋನಾ ಹೆಸರಿನಲ್ಲಿ ಸರ್ಕಾರ ಸಂಕಷ್ಟದಲ್ಲಿರುವ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ದಂಡದ ಪ್ರಮಾಣ ಕಡಿಮೆ ಮಾಡಿದೆ.
