ವರದಿಗಾರ (ಅ.5): ಉಪ ಚುನಾವಣೆ ಘೋಷಣೆಯಾಗಿರುವ ಮಧ್ಯಪ್ರದೇಶ ಅನುಪ್ಪೂರ್ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಹಾಗೂ ಆಹಾರ ಖಾತೆ ಸಚಿವ ಬಿಸಾಹುಲಾಲ್ ಸಿಂಗ್ ಅವರು ಸಾರ್ವಜನಿಕರಿಗೆ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಮಧ್ಯಪ್ರದೇಶ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿದ್ದು, ಇದು ನೋಟಿನ ಸರ್ಕಾರ, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಸಂಪುಟದ ಶಾಸಕೇತರ ಸಚಿವರೊಬ್ಬರು ಹಣ ಹಂಚುತ್ತಿದ್ದಾರೆ. ಚುನಾವಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಇಂತಹ ಪ್ರಜಾಪ್ರಭುತ್ವದ ಕೊಲೆಗಾರರಿಗೆ ಜೀವನಪೂರ್ತಿ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದೆ.
ವೀಡಿಯೋದಲ್ಲಿ ಆಹಾರ ಖಾತೆ ಸಚಿವ ಬಿಸಾಹುಲಾಲ್ ಸಿಂಗ್ ಅವರು ಮಕ್ಕಳಿಗೆ 100ರ ನೋಟು ವಿತರಿಸುತ್ತಿರುವುದು ಕಾಣುತ್ತದೆ, ಜನರು ಸರತಿಸಾಲಿನಲ್ಲಿ ನಿಂತು ಹಣ ಸ್ವೀಕರಿಸುತ್ತಿದ್ದಾರೆ. ಬಿಜೆಪಿ ಪರ ಘೋಷಣೆ ಕೂಗುತ್ತಿರುವುದು ಕೂಡ ವಿಡಿಯೋದಲ್ಲಿ ಕೇಳುತ್ತದೆ.
ಬಿಸಾಹುಲಾಲ್ ಸಿಂಗ್ ಅವರು ಸಚಿವರಾಗಿದ್ದರೂ ಇನ್ನೂ ಅವರು ಶಾಸಕರಾಗಿ ಆಯ್ಕೆಯಾಗಿಲ್ಲ.
ವಿಡಿಯೋ ವೀಕ್ಷಿಸಿ:
नोटों की सरकार :
उपचुनाव में अनूपपुर से बीजेपी के संभावित प्रत्याशी एवं शिवराज सरकार के ग़ैर विधायक मंत्री खुलेआम नोट बाँटते हुये।
चुनाव आयोग इस प्रमाणिक मामले में संज्ञान लेकर लोकतंत्र के ऐसे हत्यारों पर आजीवन प्रतिबंध लगाये।@ECISVEEP @CEOMPElections @ANI @PTI_News pic.twitter.com/AyX9Q8F3Ct
— MP Congress (@INCMP) October 5, 2020
