ರಾಜ್ಯ ಸುದ್ದಿ

ಹ್ಯಾಂಗರ್ಬ್ ಸ್ಟಾರ್ಟಪ್ ಸಮ್ಮೇಳನ; ತೇಜಸ್ವಿ ಸೂರ್ಯ ಆಹ್ವಾನಿಸದಂತೆ ಹಲವು ಸಂಘಟನೆಗಳ ಒತ್ತಾಯ

ಸೂರ್ಯನನ್ನು “ಧರ್ಮಾಂಧ ವ್ಯಕ್ತಿ” ಎಂದು ಕರೆದ ಭಾರತೀಯ ವಲಸಿಗರು

ವರದಿಗಾರ (ಅ.5): ಜರ್ಮನಿಯ ಹ್ಯಾಂಬರ್ಗ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಆಯೋಜಿಸುತ್ತಿರುವ ಸ್ಟಾರ್ಟ್ ಆಪ್ ಸಮ್ಮೇಳನದ ಭಾಷಣಕಾರರ ಪಟ್ಟಿಯಿಂದ ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಹೊರಗಿಡಬೇಕು ಎಂದು ಜರ್ಮನಿಯಲ್ಲಿರುವ ಭಾರತೀಯರು, ಹಲವು ಸಂಸ್ಥೆಗಳು ಮತ್ತು ಸಂಘಟನೆಗಳು ಒತ್ತಾಯಿಸಿವೆ.

ಈ ಸಂಬಂಧ ಹ್ಯಾಂಬರ್ಗ್‌ನ ಕಾನ್ಸುಲ್ ಜನರಲ್ ಅವರಿಗೆ ಮನವಿ ಮಾಡಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರಂತಹ ಕೋಮುವಾದಿ, ಧರ್ಮಾಂಧ ವ್ಯಕ್ತಿ ಯುರೋಪಿನಲ್ಲಿ ಸುರಕ್ಷಿತ ತಾಣವನ್ನು ಕಂಡುಕೊಳ್ಳಬಾರದು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು “ಟುಸರ್ಕಲ್ಸ್.ನೆಟ್” ಭಾನುವಾರ ವರದಿ ಮಾಡಿದೆ.

ಇಂಡಿಯಾ ಸಾಲಿಡಾರಿಟಿ ಜರ್ಮನಿ, ದಿ ಹ್ಯೂಮನಿಸಂ ಪ್ರಾಜೆಕ್ಟ್, ಸಾಲಿಡಾರಿಟಿ ಬೆಲ್ಜಿಯಂ, ಇಂಡಿಯನ್ಸ್ ಎಗೇನ್ಸ್ಟ್ ಸಿಎಎ, ಎನ್ಆರ್ ಸಿ ಮತ್ತು ಎನ್ ಪಿಆರ್ – ಫಿನ್ ಲ್ಯಾಂಡ್, ಭಾರತ್ ಡೆಮಾಕ್ರಸಿ ವಾಚ್, ಇಂಡಿಯನ್ ಅಲೈಯನ್ಸ್ ಪ್ಯಾರಿಸ್, ಮತ್ತು ಫೌಂಡೇಶನ್ ಲಂಡನ್ ಸ್ಟೋರಿ ಮುಂತಾದ ಸಂಘಟನೆಗಳು ಅಕ್ಟೋಬರ್ 2 ರಂದು ಭಾರತೀಯ ದೂತಾವಾಸಕ್ಕೆ ಪತ್ರ ಬರೆದು ಈ ಒತ್ತಾಯ ಮಾಡಿವೆ.
ಎಲ್ಲಾ ಧರ್ಮದ ಭಾರತೀಯರು ಸೇರುವ ಒಂದು ಕಾರ್ಯಕ್ರಮಕ್ಕೆ ತೇಜಸ್ವಿ ಸೂರ್ಯ ಅವರಿಗೆ ಆಹ್ವಾನ ನೀಡಿರುವುದು ಕಳವಳಕಾರಿ ಎಂದು ಪತ್ರಕ್ಕೆ ಸಹಿ ಹಾಕಿರುವ ಗಣ್ಯರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ನೀಡಿದ ಹೇಳಿಕೆ, ಅವರು ಮಾಡಿರುವ ಅವಹೇಳಣಕಾರಿ ಟ್ವೀಟ್ ಗಳನ್ನು ಕೂಡ ಪತ್ರದೊಂದಿಗೆ ಲಗತ್ತಿಸಲಾಗಿದೆ.

“ದೂತಾವಾಸವು ಅವರಿಗ ಬರಲು ಅವಕಾಶ ಕಲ್ಪಿಸಿದರೆ ಅವರು ಇಲ್ಲಿ ಕೂಡ ಕೋಮು ರಾಜಕೀಯ ಭಾಷಣವನ್ನು ಬಹಿರಂಗವಾಗಿ ಆಡುತ್ತಾರೆ ಮತ್ತು ಸರ್ಕಾರವು ಒಂದು ನಿರ್ದಿಷ್ಟ ಧರ್ಮದ ಪರವಾಗಿರಬೇಕು ಎಂದು ಕರೆ ನೀಡುತ್ತಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ವಿರೋಧಿಸುವವರು ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರೂ “ದೇಶ ದ್ರೋಹಿಗಳು” ಎಂದು ಸೂರ್ಯ ನಂಬಿದ್ದಾರೆ ಎಂದು ತೇಜಸ್ವಿ ಸೂರ್ಯ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

“ಇಂತಹ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಅವಮಾನವನ್ನು ತರುತ್ತವೆ ಎಂದು ತಿಳಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರು “ಅಶಿಕ್ಷಿತ, ಅನಕ್ಷರಸ್ಥ ಮತ್ತು ಪಂಕ್ಚರ್ ಹಾಕುವವರು” ಎಂದು ಕಳೆದ ವರ್ಷ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ತೇಜಸ್ವಿ ಸೂರ್ಯ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ತೇಜಸ್ವಿ ಸೂರ್ಯ ಈ ಹಿಂದೆ ಅರಬ್ ಮಹಿಳೆಯರ ಬಗ್ಗೆ ಅಹವೇಳನಕಾರಿಯಾಗಿ ಬರೆದಿದ್ದ ಟ್ವೀಟ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಹಿಂದೂ ಅಲ್ಲದ ಸಮುದಾಯಗಳ ಕುರಿತಂತೆ ಸ್ಪಷ್ಟವಾಗಿ ವಿಭಜನಾತ್ಮಕ ಅಜೆಂಡಾವಿದೆ. ಯುರೋಪಿಯನ್ ಸಿದ್ಧಾಂತಗಳಾದ ಸಮಾನತೆ, ವೈವಿಧ್ಯತೆ ಹಾಗೂ ಸರ್ವರನ್ನೂ ಒಳಗೊಳ್ಳುವ ಸಿದ್ಧಾಂತಕ್ಕೆ ಅವರ ಈ ಅಜೆಂಡಾ ವಿರುದ್ಧವಾಗಿದೆ. ಅವರ ನಿಲುವು ವಿವಿಧ ಅಂತಾರಾಷ್ಟ್ರೀಯ ಕಾನೂನುಗಳಿಗೂ ಹಾಗೂ ಇಯು ಚಾರ್ಟರ್ ಆಫ್ ಫಂಡಮೆಂಟಲ್ ರೈಟ್ಸ್ಗೂ ವಿರುದ್ಧವಾಗಿದೆ ಎಂದು ಭಾರತೀಯ ಕಾನ್ಸುಲೇಟ್ಗೆಹ ಬರೆದ ಪತ್ರದಲ್ಲಿ ಹಲವು ಸಂಘಟನೆಗಳು ಹೇಳಿವೆ.

ಬಿಜೆಪಿ ನಾಯಕನಿಗೆ ನೀಡಿದ ಆಹ್ವಾನವನ್ನು ಮರು ಪರಿಶೀಲಿಸಿ, ವೈವಿಧ್ಯಮಯ ಹಿನ್ನೆಲೆ ಮತ್ತು ಅನುಭವಗಳನ್ನು ಹೊಂದಿರುವ ಭಾಷಣಕಾರರನ್ನು ಕರೆಸಿ ಎಲ್ಲರನ್ನು ಒಳಗೊಳ್ಳುವ, ವೈವಿಧ್ಯತೆ ಮತ್ತು ಮಾನವ ಹಕ್ಕುಗಳ ಯುರೋಪಿಯನ್ ಮೌಲ್ಯಗಳಿಗೆ ಬದ್ಧತೆ ಪ್ರದ್ರರ್ಶಿಸಬೇಕು ಎಂದು ಭಾರತೀಯ ದೂತಾವಾಸವನ್ನು ಒತ್ತಾಯಿಸಲಾಗಿದೆ.

ಸೂರ್ಯನನ್ನು “ಧರ್ಮಾಂಧ ವ್ಯಕ್ತಿ” ಎಂದು ಕರೆದ ಭಾರತೀಯ ವಲಸಿಗರು, ಜರ್ಮನಿಯಲ್ಲಿ ಮಾತನಾಡಲು ಅವರಿಗೆ ಅಧಿಕೃತ ವೇದಿಕೆಯನ್ನು ನೀಡುವುದರಿಂದ ಯುರೋಪಿನ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ನೀತಿಗೆ ಧಕ್ಕೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group