ರಾಷ್ಟ್ರೀಯ ಸುದ್ದಿ

ನಕಲಿ ಗುರುತಿನ ಚೀಟಿಯಲ್ಲಿ ಸಿಮ್ ಮಾರಿದ ಏಕೈಕ ಕಾರಣಕ್ಕೆ ಮುಸ್ಲಿಂ ಯುವಕನ ವಿರುದ್ಧ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲು

ವರದಿಗಾರ (ಅ.5): ನಕಲಿ ಗುರುತಿನ ಚೀಟಿಯಲ್ಲಿ ಕಾಲೇಜು ವಿದ್ಯಾರ್ಥಿಗೆ ಮೊಬೈಲ್ ಸಿಮ್ ಕಾರ್ಡ್ ಮಾರಾಟ ಮಾಡಿದ ಮುಸ್ಲಿಂ ಯುವಕನೊಬ್ಬನನ್ನು ದಹೆಲಿ ಪೊಲೀಸರು ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಿ ಜೈಲಿಗಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.

ಆದರೆ ಆತನ ವಿರುದ್ಧದ ಎಫ್ ಐಆರ್ ನಲ್ಲಿರುವುದು ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳಲ್ಲಿ ಭಾರೀ ಭಿನ್ನವಾಗಿದೆ. ಇಲ್ಲಿ ಪೊಲೀಸರು ತದ್ವಿರುದ್ದ ಹೇಳಿಕೆ ನೀಡಿದ್ದಾರೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗೆ ಸಿಮ್ ಕಾರ್ಡ್ ಮಾರಾಟ ಮಾಡಲು ಸುಳ್ಳು ಗುರುತಿನ ಚೀಟಿ ಬಳಸಿದ ಆರೋಪದ ಮೇಲೆ 35 ವರ್ಷದ ಫೈಜಾನ್ ಖಾನ್ ಎಂಬಾತನನ್ನು ಜುಲೈ 29ರಂದು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಬಂಧಿಸಲಾಯಿತು. ಇದಾದ ಎರಡು ವಾರಗಳ ಬಳಿಕ, ಪೊಲೀಸರು ಆತನ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತ ಎರಡು ತಿಂಗಳಿಗಿಂತ ಹೆಚ್ಚು ಕಾಲ ತಿಹಾರ್ ಜೈಲಿನಲ್ಲಿದ್ದು, ಆಗಸ್ಟ್ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ಏರ್‌ಟೆಲ್ ಮಾರಾಟ ಏಜೆಂಟ್ ಆಗಿರುವ ಖಾನ್, 24 ವರ್ಷದ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಸಿಮ್ ಕಾರ್ಡ್ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಆಸಿಫ್ ಇತರ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರೋಧಿ ಪ್ರತಿಭಟನೆ ನಡೆಸಿದ್ದು, ಇದು ದೆಹಲಿ ಗಲಭೆಗೆ ಕಾರಣವಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಫೈಜಾನ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ನಡುವಿನ ಯಾವುದೇ ಕರೆ ವಿವರಗಳು ಅಥವಾ ಸಂಭಾಷಣೆಯ ಮಾಹಿತಿಯಿಲ್ಲ. ಅವರಿಬ್ಬರಿಗೂ ಪರಿಚಯವೇ ಇಲ್ಲ. ಯಾವುದೇ ಹಿಂಸಾಚಾರ ನಡೆದ ಯಾವುದೇ ಪ್ರವೇಶದಲ್ಲಿ ಆತ ಇರಲಿಲ್ಲ. ಮಾತ್ರವಲ್ಲ ಯಾವತ್ತೂ ಯಾವುದೇ ಪ್ರತಿಭಟನೆಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಖಾನ್‌ ಪರ ವಕೀಲ ಅಜ್ರಾ ರೆಹಮಾನ್ ಹೇಳಿದ್ದಾರೆ.
ಹೆಚ್ಚಿನ ಹಣಕ್ಕಾಗಿ ಸಿಮ್ ಕಾರ್ಡೊಂದನ್ನು ಮಾರಾಟ ಮಾಡಿದ ಕಾರಣಕ್ಕಾಗಿ ಆತನನ್ನು ಕಠಿಣ ಯುಎಪಿಎಯಡಿ ಬಂಧಿಸಲಾಗಿದೆ ಎಂದು ಆತನ ವಕೀಲ ಹೇಳುತ್ತಾರೆ. ಆತನಿಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ, ಇದುವರೆಗೆ ಆತ ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ, ಆದರೂ ಪೊಲೀಸರು ದುರುದ್ದೇಶಪೂರಿತವಾಗಿ ಆತನನ್ನು ಸುಳ್ಳು ಪ್ರಕರಣದಡಿ ಸಿಲುಕಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group