ಬೆಂಗಳೂರು ಟೌನ್ ಹಾಲ್ ನಿಂದ ಗಾಂಧೀಜಿಯವರ ಸಂದೇಶವನ್ನು ಸಾರುವ ಕಾಲ್ನಡಿಗೆ
ವರದಿಗಾರ (ಅ.01): ನಮ್ಮ ಧ್ವನಿ ಬಳಗದ ಸ್ಥಾಪಕರಾದ ಮಹೇಂದ್ರ ಕುಮಾರ್ ರವರ ಸ್ಮರಣಾರ್ಥ ಗಾಂಧಿ ಜಯಂತಿ ಪ್ರಯುಕ್ತ ‘ನಮ್ಮ ಧ್ವನಿ’ ಬಳಗವು ನಾಳೆ (ಅಕ್ಟೋಬರ್ 02) ಬೆಂಗಳೂರಿನಲ್ಲಿ “ನಮ್ಮ ನಡೆ, ಗಾಂಧಿ ಕಡೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಟೌನ್ ಹಾಲ್ ಮುಂಭಾಗದಿಂದ “ಮನುಕುಲದ ಅತ್ಯಂತ ಶಕ್ತಿಯುತ ಅಸ್ತ್ರ ಎಂದರೆ ಶಾಂತಿ” ಎಂಬ ಘೋಷಣೆಯೊಂದಿಗೆ ಮೌರ್ಯ ಸರ್ಕಲ್ ವರೆಗೆ ಗಾಂಧೀಜಿಯವರ ಸಂದೇಶವನ್ನು ಸಾರುವ ಕಾಲ್ನಿಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಧ್ವನಿ ಬಳಗದ ಮುಖ್ಯಸ್ಥರಾದ ಲೋಹಿತ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
