ರಾಷ್ಟ್ರೀಯ ಸುದ್ದಿ

ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಬಿಜೆಪಿ ನಾಯಕರ ಮನೆ ಮುಂದೆ ಧರಣಿಗೆ ಮುಂದಾದ ಪಂಜಾಬ್ ರೈತರು

ವರದಿಗಾರ (ಅ.1): ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಗುರುವಾರದಿಂದ ಬಿಜೆಪಿ ನಾಯಕರ ಮನೆ ಮುಂದೆ ಧರಣಿ ನಡೆಸಲು ಪಂಜಾಬ್ ರೈತರು ನಿರ್ಧರಿಸಿದ್ದಾರೆ, ಇದರ ಜೊತೆಗೆ ರೈಲು ರೋಕೊ ಹೋರಾಟವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ. ಜಾರಿಗೆ ತಂದಿರುವ ವಿವಾದಾತ್ಮಕ ಕಾನೂನುಗಳ ವಿರುದ್ಧ ಎಲ್ಲಾ ಗ್ರಾಮ ಸಭೆಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ರೈತ ಸಂಘಟನೆಗಳು ಗ್ರಾಮ ಪಂಚಾಯತ್ ಗಳಿಗೆ ಕರೆ ನೀಡಿವೆ.

ಹೋರಾಟವನ್ನು ತೀವ್ರಗೊಳಿಸಲು 31 ರೈತ ಸಂಘಟನೆಗಳು ಕೈಜೋಡಿಸಿವೆ. ರಾಜ್ಯದ ಬಿಜೆಪಿ ನಾಯಕರ ಮನೆಗಳ ಮುಂದೆ ರೈತರು ಧರಣಿ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿಕಲನ್ ಬುಧವಾರ ತಿಳಿಸಿದ್ದಾರೆ.

ಮಾಜಿ ಸಚಿವ ಸುರ್ಜಿತ್ ಕುಮಾರ್ ಜಯಾನಿ ಸೇರಿದಂತೆ ನಾಲ್ವರು ಬಿಜೆಪಿ ನಾಯಕರ ನಿವಾಸಗಳ ಹೊರಗೆ ‘ಧರಣಿ’ ನಡೆಸಲು ನಿರ್ಧರಿಸಿದ್ದೇವೆ ಎಂದು ಸಿಂಗ್ ಮಾಹಿತಿ ನೀಡಿದರು. ಏಕ್ತಾ ಉಗ್ರಾಹನ್ ಬ್ಯಾನರ್ ಅಡಿಯಲ್ಲಿರುವ ರೈತರು ಪಾಟಿಯಾಲ, ಸುನಮ್ (ಸಂಗ್ರೂರ್), ಬುಧ್ಲಾಡಾ (ಮಾನಸಾ) ಮತ್ತು ಗಿಡ್ಡರ್‌ಬಾಹಾ (ಮುಕ್ತರ್) ನಲ್ಲಿ ರೈಲು ಹಳಿಗಳ ಮೇಲೆ ಕುಳಿತು ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಅದೇ ರೀತಿ, ಇತರ ರೈತ ಸಂಘಟನೆಗಳು ರಾಜ್ಯದ ಹಲವು ಸ್ಥಳಗಳಲ್ಲಿ ರೈಲ್ವೆ ರೋಕೊ ಚಳವಳಿಯಲ್ಲಿ ಭಾಗವಹಿಸಲಿವೆ. ಪ್ರಸ್ತುತ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು ಸೆಪ್ಟೆಂಬರ್ 24 ರಿಂದ ಅಮೃತಸರ ಮತ್ತು ಫಿರೋಜ್ ಪುರದಲ್ಲಿ ರೈಲು ರೋಕೊ ಚಳವಳಿ ನಡೆಸುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group