ವಿದೇಶ ಸುದ್ದಿ

20ಲಕ್ಷ ಹಜ್ಜಾಜಿಗಳು ಸಾಕ್ಷಿಯಾದ ಅರಫಾ ಮೈದಾನ

ವರದಿಗಾರ-ಮಕ್ಕತುಲ್ ಮುಕರ್ರಮ: ವಿಶ್ವದ ಮುಸ್ಲಿಮರಲ್ಲಿರುವ ಬಹುದೊಡ್ಡ ಕನಸಾಗಿದೆ ಜೀವನದಲ್ಲೊಂದು ಬಾರಿ ಹಜ್ಜ್ ನಿರ್ವಹಿಸುವುದು. ಹಾಗೂ ಇಸ್ಲಾಮಿನಲ್ಲಿ ಹಜ್ಜ್ ನಿರ್ವಹಿಸುವುದು ಕಡ್ಡಾಯವೂ ಹೌದು. 2017ರ ಹಜ್ಜ್ ಇದೀಗಾಗಲೇ ಪ್ರಾರಂಭಗೊಂಡಿದ್ದು ಕೋಟ್ಯಾಂತರ ಜನರ ಮನಸ್ಸು ಪವಿತ್ರ ಮಕ್ಕಾ ಕಡೆ ದೃಷ್ಠಿ ಬೆಳೆಸಿದೆ.
ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಹಜ್ಜಾಜಿಗಳಲ್ಲಿ ಭಾರತದಿಂದ ಈ ಸಲ 1ಲಕ್ಷದ 70ಸಾವಿರ ಹಜ್ಜಾಜಿಗಳು ಹಜ್ಜ್ ಕರ್ಮ ಪೂರೈಸುವುದಕ್ಕಾಗಿ ಮಕ್ಕಾ ಆಗಮಿಸಿದ್ದಾರೆ.

ಹಜ್ಜ್ ಕರ್ಮದಲ್ಲಿ ಪ್ರಮುಖ ಅಂಗವಾಗಿರುವ ‘ಅರಫಾ’ ಕರ್ಮವು ಗುರುವಾರ ಮಕ್ಕತುಲ್ ಮುಕರ್ರಮದ ಅರಫಾ ಮೈದಾನದಲ್ಲಿ 20ಲಕ್ಷ ಹಜ್ಜಾಜಿಗಳು ಇಹ್ರಾಂ (ಶ್ವೇತವಸ್ರ್ತ)ನಲ್ಲಿ ಸಾಕ್ಷಿಯಾಗುವುದರ ಮೂಲಕ ಹಜ್ಜ್ ಕರ್ಮದ ಪ್ರಮುಖ ಅಂಗವನ್ನು ಪೂರೈಸಿದರು. ಪ್ರಾರ್ಥನೆ ಮತ್ತು ಕಣ್ಣೀರಿನೊಂದಿಗೆ ಹಾಜಿಗಳು ಅರಫಾ ಮೈದಾನದಲ್ಲಿ ಕಂಡು ಬಂದರು.

ಹಜ್ಜ್ ಎಂದರೆ ಅರಫಾ ವಾಗಿದೆ. ಅರಫಾವು ಹಜ್ಜಾಜಿಗಳ ಪಾಲಿಗೆ ಹಬ್ಬವಾಗಿದೆ. ಹಜ್ಜ್ ತ್ಯಾಗ, ಬಲಿದಾನ ಮತ್ತು ಐಕ್ಯತೆಯ ಸಂಕೇತವಾಗಿದೆ. ಹಾಜಿಗಳು ಅರಫಾದಲ್ಲಿರುವ ದಿನ ವಿಶ್ವದ ಮುಸ್ಲಿಂ ಭಾಂಧವರು ಉಪವಾಸ ವೃತವನ್ನು ಆಚರಿಸುತ್ತಾರೆ.

ಸದ್ಯ ಹಜ್ಜಾಜಿಗಳು ಅರಫಾ ಕರ್ಮವನ್ನು ಮುಗಿಸಿ ಮುಝ್ದಲಿಫಾ ತಲುಪಿದ್ದಾರೆ. ಹಜ್ಜ್ ಕರ್ಮದ ಭಾಗವಾಗಿರುವ ಶೈತಾನ್ ಗೆ ಕಲ್ಲು ಎಸೆಯುವುದಕ್ಕಾಗಿ ಹಾಜಿಗಳು ಮುಝ್ದಲಿಫಾ ದಿಂದ ಕಲ್ಲುಗಳನ್ನು ಪಡೆದುಕೊಂಡು ಶುಕ್ರವಾರ ಫಜರ್ ನಮಾಜ್ ಬಳಿಕ ಮೀನಾ ಪ್ರದೇಶಕ್ಕೆ ಬಂದು ಅಲ್ಲಿಂದ ಜಮರಾತ್ ಗೆ ತೆರಳಿ ‘ಶೈತಾನ್’ಗೆ ಕಲ್ಲು ಎಸೆಯಲಿದ್ದಾರೆ. ಅಲ್ಲಿಂದ ಮೀನಾದಲ್ಲಿರುವ ತಮ್ಮ ವಸತಿಗಳಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಹೀಗೆ ಮೂರು ದಿನ ಜಮರಾತ್ ಗೆ ತೆರಳಿ ಶೈತಾನನಿಗೆ ಕಲ್ಲು ಎಸೆಯಲಿದ್ದಾರೆ.

ಸೌದಿ ಸರಕಾರವು ಭದ್ರತೆಗಾಗಿ ಭಾರೀ ಸಂಖ್ಯೆಯಲ್ಲಿ ಭ್ರದತಾ ಪಡೆಗಳನ್ನು ನಿಯೋಜಿಸಿದೆ. ಹಾಗೂ ಆರೋಗ್ಯದ ಭಾಗವಾಗಿ ವಿವಿಧ ವೈದ್ಯಕೀಯ ಮತ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ.
ಹಲವು ಅನಿವಾಸಿ ಭಾರತೀಯ ಸಂಘಟನೆಗಳ ಸ್ವಯಂ ಸೇವಕರು ಹಜ್ಜಾಜಿಗಳ ಸೇವೆಗೆ ನೆರವಾಗುತ್ತಿರುವುದು ಅರಫಾ ಮೈದಾನದಲ್ಲಿ ಕಂಡು ಬಂತು. ಭಾರತೀಯ ಹಜ್ಜ್ ಅಧಿಕಾರಿಗಳು ಉಪಸ್ಥಿತರಿದ್ದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group