ರಾಷ್ಟ್ರೀಯ ಸುದ್ದಿ

ಇವರು ನಿರಪರಾಧಿಗಳಾದರೆ, ಮಸೀದಿ ಧ್ವಂಸಗೊಳಿಸಿದ್ದು ಯಾರು ?; ಒವೈಸಿ

ವರದಿಗಾರ (ಸೆ.30): ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಇತರ 30 ಮಂದಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿರುವ ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ, ಇವರೆಲ್ಲರೂ ನಿರಪರಾಧಿಗಳಾದರೆ ಮಸೀದಿ ಒಡೆದಿದ್ದು ಯಾರು ? ಎಂದು ಪ್ರಶ್ನಿಸಿದ್ದಾರೆ.

ಇದು ಭಾರತೀಯ ನ್ಯಾಯಾಂಗದಲ್ಲಿ ಒಂದು ಕಪ್ಪು ದಿನವೆಂದು ಬಣ್ಣಿಸಿದ ಒವೈಸಿ, ಈ ತೀರ್ಪು ಹಿಂದುತ್ವ ಸಿದ್ಧಾಂತವನ್ನು ಜಾರಿಗೊಳಿಸುವ ಉದ್ದೇಶದಿಂದ ನೀಡಲಾಗಿದೆ. ಭಾರತದ ಮುಸ್ಲಿಮರಿಗೆ ನ್ಯಾಯ ದೊರೆತಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಾನು ಎಐಎಂಪಿಎಲ್ ಬಿಯನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರು ನೀಡಿದ ತೀರ್ಪಿನಲ್ಲಿ ಬಾಬರಿ ಮಸೀದಿ ಧ್ವಂಸವು ಸ್ಪಷ್ಟ ಕಾನೂನುಬಾಹಿರ ಮತ್ತು “ಕಾನೂನಿನ ನಿಯಮದ ಉಲ್ಲಂಘನೆ” ಎಂದು ಅಭಿಪ್ರಾಯಪಟ್ಟಿದ್ದರು ಎಂದು ಒವೈಸಿ ವಿವರಿಸಿದ್ದಾರೆ.

ಈಗ, 1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ರಹಸ್ಯವಾಗಿ ನೆಲಕ್ಕೆ ಉರುಳಿಸಲಾಗಿದೆಯೆ ಮತ್ತು 1940ರ ದಶಕದ ಉತ್ತರಾರ್ಧದಲ್ಲಿ ಮಸೀದಿಯಲ್ಲಿ ರಾಮ ವಿಗ್ರಹಗಳನ್ನು ಇಡುವುದರ ಹಿಂದೆ ಅಥವಾ ರಾಜೀವ್ ಗಾಂಧಿ ಆಡಳಿತದಲ್ಲಿ ಮಸೀದಿಯ ಬೀಗಗಳನ್ನು ರಹಸ್ಯವಾಗಿ ತೆರೆಯಲಾಯಿತೇ ? ಎಂದು ಒವೈಸಿ ಪ್ರಶ್ನಿಸಿದ್ದಾರೆ.

ಘಟನೆಯಲ್ಲಿ ಎಲ್ಲರೂ ನಿರಪರಾಧಿಗಳಾಗಿದ್ದಾಗ ಬಾಬರಿ ಮಸೀದಿಯನ್ನು ಯಾರು ಕೆಡವಿದರು ? ಎಂದು ಅವರು ಪ್ರಶ್ನಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group