ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಮೇಲ್ವರ್ಗದ ನಾಲ್ವರಿಂದ ಅತ್ಯಾಚಾರ: ಕೊನೆಗೂ ಬದುಕುಳಿಯಲಿಲ್ಲ ದಲಿತ ಯುವತಿ

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರು

ವರದಿಗಾರ (ಸೆ.29): ಮೇಲ್ವರ್ಗದ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಹತ್ತೊಂಬತ್ತು ವರ್ಷದ ದಲಿತ ಹುಡುಗಿ ಕೊನೆಗೂ ಬದುಕುಳಿಯಲಿಲ್ಲ.

ಕಳೆದ ಮೂರು ದಿನಗಳಿಂದ ಅಲಿಘಢ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯನ್ನು ನಿನ್ನೆ ದಹೆಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಹುಡುಗಿ ಅಲ್ಲಿ ಕೊನೆಯುಸಿರೆಳೆದಿದ್ದಾಳೆ.

ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದಾಗ ಸೆಪ್ಟಂಬರ್ 14ರಂದು ನಾಲ್ವರು ಆಕೆಯ ಮೇಲೆ ಮೇಲ್ವರ್ಗದ ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ವೆಸಗಿದ ಬಳಿಕ ಆಕೆಯ ಬೆನ್ನು ಮೂಳೆಯನ್ನು ದುಷ್ಕರ್ಮಿಗಳು ಮುರಿದು, ನಾಲಗೆ ಕತ್ತರಿಸಿ, ಕೊಲೆಯತ್ನ ನಡೆಸಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಮೊದಲು ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಿಸಲಾಗಿತ್ತು. ಸೆ.21ರಂದು ಹುಡುಗಿಗೆ ಪ್ರಜ್ಞೆ ಬಂದಾಗ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿರುವುದು ದೃಢಪಟ್ಟಿತ್ತು. ಆಕೆಯ ಬಾಲಗೆಯನ್ನು ಅತ್ಯಾಚಾರಿಗಳು ಕತ್ತರಿಸಿದ್ದರಿಂದ ಆರೋಪಿಗಳ ಹೆಸರು ಹೇಳಲು ಆಕೆಗೆ ಸಾಧ್ಯವಾಗಲಿಲ್ಲ.

ಸೆಪ್ಟೆಂಬರ್ 14 ರಂದು ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ.

ಸಂತ್ರಸ್ತೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳಾಗಿದ್ದು, ಅತ್ಯಾಚಾರಿಗಳು ಮೇಲ್ವರ್ಗಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ತಾಯಿ, ಸಹೋದರಿ ಮತ್ತು ಅಣ್ಣ ಹುಲ್ಲು ತರಲು ಹೊಲಕ್ಕೆ ಹೋಗಿದ್ದರು. ನನ್ನ ಸಹೋದರ ದೊಡ್ಡ ಬಂಡಲ್ ಹುಲ್ಲಿನೊಂದಿಗೆ ಮೊದಲು ಮನೆಗೆ ಆಗಮಿಸಿದ್ದಾನೆ. ಆದರೆ ನನ್ನ ತಾಯಿ ಮತ್ತು ಸಹೋದರಿ ಇನ್ನೂ ಹುಲ್ಲು ಕತ್ತರಿಸುತ್ತಲೇ ಇದ್ದರು. ಅವರಿಬ್ಬರೂ ಸ್ವಲ್ಪ ದೂರದಲ್ಲಿದ್ದರು. ಹಿಂದಿನಿಂದ ಬಂದ ನಾಲ್ಕೈದು ಜನ ನನ್ನ ತಂಗಿಯ ದುಪಟ್ಟಾವನ್ನು ಅವಳ ಕುತ್ತಿಗೆಗೆ ಬಿಗಿದು ಬಜ್ರಾ ಮೈದಾನದೊಳಗೆ ಎಳೆದೊಯ್ದರು ಎಂದು ಮೃತ ಹುಡುಗಿಯ ಸಹೋದರ ಎನ್‌ಡಿಟಿವಿಗೆ ತಿಳಿಸಿದ್ದಾರೆ.

“ಮಗಳು ಕಾಣೆಯಾದುದನ್ನು ಅರಿತ ತಾಯಿ, ಆಕೆಯನ್ನು ಹುಡುಕುತ್ತಾ ಹೋದಾಗ ನಿರ್ಜನ ಪ್ರದೇಶದಲ್ಲಿ ಅಲ್ಲಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಪೊಲೀಸರು ಆರಂಭದಲ್ಲಿ ನಮಗೆ ಸಹಾಯ ಮಾಡಲಿಲ್ಲ; ಮಾತ್ರವಲ್ಲ ತ್ವರಿತ ಕ್ರಮ ತೆಗೆದುಕೊಳ್ಳಲಿಲ್ಲ. ಅವರು ನಾಲ್ಕೈದು ದಿನಗಳ ನಂತರ ಮಾತ್ರ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮಹಿಳೆಯ ಸಹೋದರ ತಿಳಿಸಿದ್ದಾನೆ ಎಂದು ಎನ್ ಡಿಟಿವಿ ವರದಿ ಮಾಡಿದ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group