ರಾಷ್ಟ್ರೀಯ ಸುದ್ದಿ

ಹರ್ಯಾಣ: ಬಿಜೆಪಿ ಹಾಗೂ ಜೆಜೆಪಿಗೆ ಗ್ರಾಮಸ್ಥರಿಂದ ಬಹಿಷ್ಕಾರ!

ಗ್ರಾಮದೊಳಗೆ ನುಸುಳಿದಲ್ಲಿ ಬಿಜೆಪಿಗರಿಗೆ ರೈತರ ಲಾಠಿಯೇಟಿನ ಎಚ್ಚರಿಕೆ

ವರದಿಗಾರ(ಸೆ.28) : ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಲ್ಲಿ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವ ಹರಿಯಾಣದ ಹಳ್ಳಿಯೊಂದರಲ್ಲಿ ಗ್ರಾಮಸ್ಥರು ಬಿಜೆಪಿ ಹಾಗೂ ಜೆಜೆಪಿ ಪಕ್ಷಗಳನ್ನು ಗ್ರಾಮದಿಂದ ಬಹಿಷ್ಕರಿಸಿ ಹಾಕಿದ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹರ್ಯಾಣದ ಅಂಬಾಲದ ಫಡೌಲಿ ಗ್ರಾಮದ ನಿವಾಸಿಗಳು ಬಿಜೆಪಿ ಹಾಗೂ ಜೆಜೆಪಿಯನ್ನು ಬಹಿಷ್ಕರಿಸಿದ್ದಾರೆ. ಅದಲ್ಲದೆ, ಈ ಎರಡು ರೈತ ವಿರೋಧಿ ಪಕ್ಷಗಳು ಗ್ರಾಮದೊಳಗೆ ನುಸುಳಲು ಪ್ರಯತ್ನಿಸಿದಲ್ಲಿ, ಪ್ರತಿಭಟಿಸುವ ರೈತರ ಮೇಲೆ ಸರ್ಕಾರ ಲಾಠಿ ಚಾರ್ಜ್ ನಡೆಸಿದಂತೆಯೇ, ಗ್ರಾಮದ ರೈತರು ಬಿಜೆಪಿಗರ ಮೇಲೆ ಲಾಠಿ ಚಾರ್ಜ್ ನಡೆಸಬಹುದೆಂದು ಎಚ್ಚರಿಕೆಯೂ ನೀಡಲಾಗಿದೆ.

ಅಂಬಾಲಾದ ಜಲ್ಬೆಹ್ರಾ ಗ್ರಾಮದಲ್ಲಿಯೂ ಬಿಜೆಪಿ ಹಾಗೂ ಜೆಜೆಪಿಯನ್ನು ಇದೇ ರೀತಿ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group