ಪುತ್ತೂರು, ಸೆ.27:- ಎಸ್ಡಿಪಿಐ ಪಡೀಲ್ ಬ್ರಾಂಚ್ ವತಿಯಿಂದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಇದರ ಸಹಕಾರದೊಂದಿಗೆ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಭಾಗಿತ್ವದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಪಡೀಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಪಡೀಲ್ ಬ್ರಾಂಚ್ ಅಧ್ಯಕ್ಷರಾದ ಶರೀಫ್ ಬನ್ನೂರು ವಹಿಸಿದರು.ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಕೆ ಎ ಸಿದ್ದೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ವೈಧ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನದ ಮಹತ್ವವನ್ನು ವಿವರಿಸಿದರು.ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷರಾದ ಬಶೀರ್ ಕೂರ್ನಡ್ಕ ರಕ್ತದಾನಿಗಳಿಗೆ ಶುಭ ಹಾರೈಸಿದರು.ಅನ್ಸಾರುದ್ದೀನ್ ಎಜುಕೇಶನ್ ಸೆಂಟರ್ ಸಾಲ್ಮರ ಇದರ ವ್ಯವಸ್ಥಾಪಕರಾದ ಯು ಮುಹಮ್ಮದ್ ಹಾಜಿ ಶುಭ ಸಂದೇಶ ನೀಡಿದರು.
ವೇದಿಕೆಯಲ್ಲಿ ಮೋಹಿನುಲ್ ಇಸ್ಲಾಂ ಜುಮಾ ಮಸ್ಜಿದ್ ಪಡೀಲ್ ಅಧ್ಯಕ್ಷರಾದ ಆರ್.ಪಿ ರಝಾಕ್,ಕಾರ್ಯದರ್ಶಿ ಸಂಶುದ್ದೀನ್,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಬಕ ಡಿವಿಜನ್ ಅದ್ಯಕ್ಷರಾದ ಅಝೀಝ್ ಕಬಕ,ಸಾಮಾಜಿಕ ಕಾರ್ಯಕರ್ತರಾದ ಪಲುಲ್ ಹಾಜಿ,ಸಿಲ್ ಸಿಲಾ ವೆಲ್ಫೇರ್ ಅಸೋಸಿಯೇಷನ್ ಬನ್ನೂರು ಆದ್ಯಕ್ಷರಾದ ಇಬ್ರಾಹಿಮ್ ಕೆ ಎಂ ಬನ್ನೂರು,ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು ಅಧ್ಯಕ್ಷರಾದ ಅಝರ್ ಬನ್ನೂರು,ಉದ್ಯಮಿಗಳಾದ ಫಾರೂಕ್ ಪಡೀಲ್,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಡಿಕಲ್ ಉಸ್ತುವಾರಿ ಇಫಾಝ್ ಬನ್ನೂರು,ಎಸ್ಡಿಪಿಐ ಪಡೀಲ್ ಬ್ರಾಂಚ್ ಕಾರ್ಯದರ್ಶಿ ಇರ್ಫಾನ್ ಪಡೀಲ್ ಉಪಸ್ಥಿತರಿದ್ದರು.ಅಬ್ದುಲ್ ಅಝೀಝ್ ಪಡೀಲ್ ಕಾರ್ಯಕ್ರಮ ನಿರೂಪಿಸಿದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 54 ಮಂದಿ ರಕ್ತದಾನ ಮಾಡಿ ಸಹಕರಿಸಿದರು
