ಕತಾರ್:ನಿಮ್ಮಲ್ಲಿ ಗಲ್ಫ್ ರಾಷ್ಟ್ರವನ್ನು ನೋಡಬೇಕೆಂಬ ಕನಸಿದ್ದರೆ, ಅದನ್ನು ನನಸಾಗಿಸುವ ಅವಕಾಶವೊಂದಿದೆ.ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಕತಾರ್ ಸರಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸುಮಾರು 80 ರಾಷ್ಟ್ರಗಳಿಗೆ ವೀಸಾ ನಿಬಂಧನೆಯನ್ನು ಕತಾರ್ ಸರಕಾರ ಹಿಂಪಡೆದಿದೆ. 80 ರಾಷ್ಟ್ರಗಳ ಪೈಕಿ ಭಾರತ, ಅಮೇರಿಕಾ,ಲೆಬನಾನ್, ದಕ್ಷಿಣ ಆಫ್ರಿಕಾ, ನ್ಯೂಜಿಲಾಂಡ್ ಮುಂತಾದ ದೇಶಗಳ ಪ್ರಜೆಗಳು ವೀಸಾ ಇಲ್ಲದೆಯೇ ಪ್ರಯಾಣವನ್ನು ಬೆಳೆಸಬಹುದು. ವೀಸಾ ನಿಬಂಧನೆಯನ್ನು ಹಿಂಪಡೆಯುವ ಮೂಲಕ ಕತಾರ್ ದೇಶವು ಸೌದಿ ರಾಷ್ಟ್ರಗಳಲ್ಲಿಯೇ ವೀಸಾ ಮುಕ್ತ ದೇಶವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಕತಾರ್ ಮುಕ್ತ ಭೇಟಿಗೆ ಬರುವ 80ರಾಷ್ಟ್ರಗಳ ಪೈಕಿ 33ರಾಷ್ಟ್ರಗಳ ಪ್ರಜೆಗಳಿಗೆ 180ದಿನ(6ತಿಂಗಳು) ಅವಕಾಶ ಹಾಗೂ ಉಳಿದ 47ರಾಷ್ಟ್ರದ ಪ್ರಜೆಗಳಿಗೆ 30ದಿನ(1ತಿಂಗಳು)ಗಳ ಕಾಲ ಉಳಿಯುವ ಅವಕಾಶವಿದೆ ಎಂದು ಕತಾರ್ ಸರಕಾರ ಘೋಷಿಸಿದೆ.
