ರಾಷ್ಟ್ರೀಯ ಸುದ್ದಿ

ಮಥುರಾ ಶ್ರೀಕೃಷ್ಣ ಭೂಮಿ ವಿವಾದ ಮುಗಿದ ಅಧ್ಯಾಯ: ಒವೈಸಿ

ವರದಿಗಾರ (ಸೆ.27): ಮಥುರಾ ಶ್ರೀಕೃಷ್ಣ ಭೂಮಿ ವಿವಾದ ಮುಗಿದ ಅಧ್ಯಾಯ. ಶ್ರೀಕೃಷ್ಣ ಜನ್ಮಸ್ಥಾನ್ ಸೇವಾ ಸಂಘ ಹಾಗೂ ಶಾಹಿ ಈದ್ಗಾ ಟ್ರಸ್ಟ್ ನಡುವಿನ ವಿವಾದ 1968 ರಲ್ಲಿ ಇತ್ಯರ್ಥಗೊಂಡಿದೆ. ಈಗ ಅದನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ.

ಶ್ರೀ ಕೃಷ್ಣ ಜನ್ಮಸ್ಥಾನದ ಸಂಪೂರ್ಣ ಭೂಮಿಯ ಮೇಲೆ ಹಕ್ಕು ಸಾಧಿಸಿ ಮಥುರಾ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ವಿಷ್ಣು ಜೈನ್ ಎಂಬುವವರು ಹೂಡಿರುವ ಮೊಕದ್ದಮೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಾರ್ಥನಾ ಸ್ಥಳಗಳ ಬದಲಾವಣೆಯನ್ನು 1991ರ ಪೂಜಾ ಸ್ಥಳಗಳ ಕಾಯ್ದೆ ವಿರೋಧಿಸುತ್ತದೆ, ಕಾಯ್ದೆಯನ್ನು ಜಾರಿಗೊಳಿಸುವ ಹೊಣೆ ಗೃಹ ಸಚಿವಾಲಯಕ್ಕೆ ನೀಡಲಾಗಿದೆ ಎಂದು ಒವೈಸಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೃಷ್ಣ ಜನ್ಮಭೂಮಿಯ ಒಟ್ಟು 13.37 ಎಕರೆ ಭೂಮಿ ಹಿಂದೂಗಳು, ಕೃಷ್ಣ ಭಕ್ತರಿಗೆ ಪವಿತ್ರವಾಗಿದ್ದು, ಅದನ್ನು ಹಿಂದಿರುಗಿಸಬೇಕು ಎಂದು ವಿಷ್ಣು ಜೈನ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. 1968ರಲ್ಲಿ ಮಾಡಿಕೊಂಡ ರಾಜಿ ಸೂತ್ರವನ್ನು ಪಾಲಿಸಬೇಕಾದ ಅಗತ್ಯವಿಲ್ಲ. ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಜೈನ್ ಮನವಿ ಮಾಡಿದ್ದಾರೆ.

ಈದ್ಗಾ ಟ್ರಸ್ಟ್ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ಪ್ರಸ್ತುತ ಕಟ್ಟಡವನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ. ಮಥುರಾದ ಕೃಷ್ಣ ದೇವಾಲಯವನ್ನು ಔರಂಗಜೇಬ್ ನೆಲಸಮಗೊಳಿಸಿ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ವಿಷ್ಣು ಜೈನ್ ಹೇಳಿದ್ದಾರೆ. ಆದರೆ ಈ ಅರ್ಜಿಗೆ ಒವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group