ರಾಷ್ಟ್ರೀಯ ಸುದ್ದಿ

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಪ್ರತಿಭಟನೆ ಶೇಕಡಾ 700ರಷ್ಟು ಹೆಚ್ಚಳ

2014 -2016ರ ನಡುವೆ, ರೈತರ ಪ್ರತಿಭಟನೆಯ ಸಂಖ್ಯೆ 628 ರಿಂದ 4,837 ಕ್ಕೆ ಏರಿದೆ

ವರದಿಗಾರ (ಸೆ.27): ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ರೈತರ ಪ್ರತಿಭಟನೆ, ಹೋರಾಟ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. 2014 ಮತ್ತು 2016 ರ ನಡುವೆ, ರೈತರ ಪ್ರತಿಭಟನೆಯ ಸಂಖ್ಯೆ 628 ರಿಂದ 4,837 ಕ್ಕೆ ಏರಿದೆ. ಅಂದರೆ ಶೇಕಡಾ 700 ರಷ್ಟು ಹೆಚ್ಚಾಗಿದೆ ಎಂದು “ದಿ ವೈರ್” ವರದಿ ಮಾಡಿದೆ.

2014 ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ, ಸರ್ಕಾರವು ತನ್ನ ಮೊದಲ ಅಧಿಕಾರಾವಧಿಯಲ್ಲಿ ಈ ಭರವಸೆಯನ್ನು ಈಡೇರಿಸಲು ಸ್ವಲ್ಪವಾದರೂ ಪ್ರಯತ್ನ ಮಾಡಲಿಲ್ಲ. ಆದಾಗ್ಯೂ, ಇತ್ತೀಚೆಗೆ, ಮೋದಿ ಸರ್ಕಾರವು ಭಾರತದ ರೈತರ ಸಂಕಷ್ಟಗಳನ್ನು ನಿವಾರಿಸುವುದಾಗಿ ಹೇಳಿ ಮೂರು “ಐತಿಹಾಸಿಕ” ಮಸೂದೆಗಳನ್ನು ಅಂಗೀಕರಿಸಿತು. ಇದರ ವಿರುದ್ಧ ರೈತರ ವ್ಯಾಪಕ ಪ್ರತಿಭಟನೆ ಎದುರಿಸಲಾರದೆ ಕೇಂದ್ರ ಸಚಿವ ಸಂಪುಟಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಲು ಸಹ ಕಾರಣವಾಗಿದೆ. ಮಾತ್ರವಲ್ಲ ಅವರ ಪಕ್ಷ ಅಕಾಲಿದಳ ಎನ್ ಡಿಎ ಮೈತ್ರಿ ಕೂಟವನ್ನು ತೊರೆಯಬೇಕಾಗಿ ಬಂತು.

ಕಾನೂನುಬಾಹಿರ ಸಭೆಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸಂಗ್ರಹಿಸಿದ ಮಾಹಿತಿಯು ಮೋದಿ ಸರ್ಕಾರದ ಮೊದಲ ಎರಡು ವರ್ಷಗಳಲ್ಲಿ ರೈತರ ಚಳವಳಿಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ಸೂಚಿಸುತ್ತದೆ. 2014 ಮತ್ತು 2016 ರ ನಡುವೆ, ರೈತರ ಪ್ರತಿಭಟನೆಯ ಸಂಖ್ಯೆ 628 ರಿಂದ 4,837 ಕ್ಕೆ ಏರಿದೆ. ಅಂದರೆ ಶೇಕಡಾ 700 ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶ ಹೇಳುತ್ತದೆ.

2014 ಕ್ಕಿಂತ ಮೊದಲು, ರೈತರು ಹೆಚ್ಚಾಗಿ ರಾಜ್ಯ ಅಥವಾ ಸ್ಥಳೀಯ ಮಟ್ಟದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದರು. ರೈತರ ಅಸ್ವಿತ್ವ ಮತ್ತು ಹಿತಾಸಕ್ತಿಗಳು ಹೆಚ್ಚು ಜಾತಿ ರಾಜಕಾರಣದೊಳಗೆ ಸೇರಿದ ಕಾರಣ ಅವರಿಗೆ ದೊಡ್ಡ ಪ್ರಮಾಣದಲ್ಲಿ ಒಟ್ಟುಗೂಡಲು, ಪ್ರತಿಭಟನೆ ನಡೆಸಲು ಕಷ್ಟವಾಯಿತು. ಆದರೆ ಈಗ ಮಸೂದೆಯ ವಿರುದ್ಧವಾಗಿ ರಾಷ್ಟ್ರೀಯ ಮಟ್ಟದಲ್ಲಿ ರೈತರು ಒಗ್ಗೂಡಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದು ಹಂತ ತಲುಪಿದೆ ಎಂಬುದು ಕಾದು ನೋಡಬೇಕಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group