ವರದಿಗಾರ (ಸೆ.27): ವೇಶ್ಯಾವಾಟಿಕೆ ಅಪರಾಧವೆಂದು ಯಾವುದೇ ಕಾನೂನಿನಲ್ಲೂ ಇಲ್ಲ, ತಮಗೆ ಇಷ್ಟವಾದ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಮಹಿಳೆಯರು ಹೊಂದಿದ್ದಾರೆ ಎಂದು ಬಾಂಬೆ ಹೈಕೋರ್ಟ್ ವಿಲಕ್ಷಣ ತೀರ್ಪನ್ನು ನೀಡಿದೆ.
ಅವರ ಇಷ್ಟದ ವಿರುದ್ಧವಾಗಿ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಹೇಳಿ ಮೂವರು ಮಹಿಳೆಯರನ್ನು ಬಂಧ ಮುಕ್ತಗೊಳಿಸಲು ಆದೇಶಿಸಿದೆ.
ಈ ಸಂಬಂಧ ನ್ಯಾಯಮೂರ್ತಿ ಪೃಥ್ವಿ ರಾಜ್ ಚೌಹಾಣ್, ಅಕ್ರಮ ಮಾನವ ಸಾಗಾಣಿಕೆ( ನಿಗ್ರಹ) ಕಾಯ್ದೆ ಕುರಿತು ಮಹತ್ವದ ವ್ಯಾಖ್ಯಾನ ಮಾಡಿದ್ದಾರೆ. ಕಳೆದ ವರ್ಷ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿದ್ದ ಮೂವರು ಯುವತಿಯರನ್ನು ಮಹಿಳಾ ಹಾಸ್ಟೆಲ್ ಗೆ ಕಳುಹಿಸುವಂತೆ ಅಧೀನ ನ್ಯಾಯಾಲಯದ ತೀರ್ಮಾನ ಸರಿಯಾದುದಲ್ಲ ಎಂದು ಹೇಳಿದೆ.
ಪಿಐಟಿಎ-1956 ಕಾಯ್ದೆಯಲ್ಲಿ ವೇಶ್ಯಾವಾಟಿಕೆವನ್ನು ರದ್ದುಪಡಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಅದನ್ನು ಶಿಕ್ಷಾರ್ಹ ಅಪರಾಧ ಎನ್ನಲು ಯಾವುದೇ ನಿಯಮಗಳಿಲ್ಲ. ಇಂತಹ ಪ್ರಕರಣಗಳಲ್ಲಿ ಸಿಲುಕಿದವರಿಗೆ ಶಿಕ್ಷೆ ವಿಧಿಸಬೇಕೆಂಬ ನಿಬಂಧನೆ ಇಲ್ಲ ಎಂದು ನ್ಯಾಯಮೂರ್ತಿ ಚೌಹಾಣ್ ಹೇಳಿದ್ದಾರೆ.
