ರಾಷ್ಟ್ರೀಯ ಸುದ್ದಿ

ನೀವು ಪ್ರಧಾನಿಯಾಗಿಲ್ಲದ ಅನುಪಸ್ಥಿತಿ ಭಾರತಕ್ಕೆ ಕಾಡುತ್ತಿದೆ; ಮನಮೋಹನ್ ಸಿಂಗ್ ಹುಟ್ಟು ಹಬ್ಬದ ಶುಭಾಶಯ ಕೋರಿದ ರಾಹುಲ್

ವರದಿಗಾರ (ಸೆ.26):  ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಲ್ಲದಿರುವ ಅನುಪಸ್ಥಿತಿ ಭಾರತಕ್ಕೆ ಭಾಸವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಮಾಜಿ ಪ್ರಧಾನಿ ಸಿಂಗ್ ಅವರ ಜನ್ಮದಿನಕ್ಕೆ ಶುಭಾಶಯ ಕೋರುವಾಗ ಸ್ಮರಿಸಿಕೊಂಡಿದ್ದಾರೆ.

2004 ಮತ್ತು 2014ರ ಅವಧಿಯ ಯುಪಿಎ ಮೈತ್ರಿ ಸರ್ಕಾರದ ಪ್ರಧಾನಿಯಾಗಿದ್ದ ಸಿಂಗ್ ಅವರು ಶನಿವಾರ 88ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಶುಭಾಶಯ ಕೋರಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಮಂತ್ರಿಯಾಗಿ ಇಲ್ಲದ ಅನುಪಸ್ಥಿತಿಯನ್ನು ಭಾರತ ಭಾವಿಸುತ್ತದೆ. ಅವರ ಪ್ರಾಮಾಣಿಕತೆ, ಸಭ್ಯತೆ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ಮುಂದಿನ ವರ್ಷ ಹೆಚ್ಚು ಸಂತೋಷಕರವಾಗಿರಲಿ ಎಂದು ರಾಹುಲ್ ಗಾಂಧಿ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group