ವರದಿಗಾರ (ಸೆ.26): ಉಕ್ರೇನ್ನ ಸೇನಾ ವಿಮಾನವೊಂದು ಪತನಗೊಂಡು ಕನಿಷ್ಠ 25 ಜನರು ಸಾವನ್ನಪ್ಪಿರುವ ಘಟನೆ ಉಕ್ರೇನ್ನ ಖಾರ್ಕಿವ್ ಪ್ರದೇಶದಲ್ಲಿ ನಡೆದಿದೆ.
ವಿಮಾನದಲ್ಲಿ ವಾಯುಪಡೆಯ ಸಂಸ್ಥೆಯ ಮಿಲಿಟರಿ ಪೈಲಟ್ಗಳು ಮತ್ತು ಕೆಡೆಟ್ಗಳು ಇದ್ದರು. ದುರ್ಘಟನೆಯ ಸಮಯದಲ್ಲಿ, ಏಳು ಸಿಬ್ಬಂದಿ ಸೇರಿದಂತೆ 27 ಜನರು ವಿಮಾನದಲ್ಲಿದ್ದರು. ಇಳಿಯುವ ಸಮಯದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
25 ಜನರು ಸಾವನ್ನಪ್ಪಿದ್ದಾರೆ, ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸರ್ಕಾರ ಪ್ರಾಸಿಕ್ಯೂಟರ್ ಜನರಲ್ ಕಚೇರಿ ತಿಳಿಸಿದೆ.
