ರಾಷ್ಟ್ರೀಯ ಸುದ್ದಿ

ಜೈಪುರದಲ್ಲಿ ಉದ್ಯೋಗಕ್ಕಾಗಿ ಬೀದಿಗಿಳಿದ ಬುಡಕಟ್ಟು ಯುವಕರು: ಹೆದ್ದಾರಿ ಬಂದ್, ವಾಹನ, ಪೆಟ್ರೋಲ್ ಪಂಪ್ ಧ್ವಂಸ; ಹಲವು ಪೊಲೀಸರಿಗೆ ಗಾಯ

ವರದಿಗಾರ (ಸೆ.26): ಉದ್ಯೋಗ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ನೂರಾರು ಬುಡಕಟ್ಟು ಯುವಕರು ಗುರುವಾರ ಜೈಪುರದ ದುಂಗರಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಹನ ಸಂಚಾರ ತಡೆದು, ವಾಹನಗಳ ಮೇಲೆ ದಾಳಿ ನಡೆಸಿ, ಹಾನಿಗೊಳಿಸಿದ್ದಾರೆ. ಮಾತ್ರವಲ್ಲ ಪೆಟ್ರೋಲ್ ಪಂಪ್ ಅನ್ನು ಧ್ವಂಸ ಮಾಡಿದ್ದು, ಕಲ್ಲು ತೂರಾಟದಿಂದ ಹಲವು ಪೊಲೀಸರು ಗಾಯಗೊಂಡಿದ್ದಾರೆ.

ಶಿಕ್ಷಕರ ಹುದ್ದೆಗಳಿಗೆ ಖಾಲಿ ಇರುವ 1,167 ಹುದ್ದೆಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಕುರಿತು ಸೆಪ್ಟೆಂಬರ್ 23 ರಂದು ನಿಗದಿಯಾಗಿದ್ದ ಶಾಸಕರ ಸಭೆ ರದ್ದುಗೊಂಡ ನಂತರ ಯುವಕರು ಶುಕ್ರವಾರ ಆಕ್ರೋಶಗೊಂಡು ರಸ್ತೆಗಿಳಿದಿದ್ದರು. ಪೊಲೀಸರು ಅಶ್ರುವಾಯು ಸಿಡಿಸಿ, ಜನರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದರು. ಆದರೆ, ಪ್ರತಿಭಟನಕಾರರು ಶುಕ್ರವಾರ ಸಂಜೆ ವೇಳೆಗೆ ಉದಯಪುರ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ 8 ರ 5 ಕಿ.ಮೀ. ದೂರದವರೆಗೆ ರಸ್ತೆಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಹೆದ್ದಾರಿ ಇನ್ನೂ ನಿರ್ಬಂಧಿಸಲ್ಪಟ್ಟಿದೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರು ಇದುವರೆಗೆ ಸುಮಾರು 30 ಜನರನ್ನು ಬಂಧಿಸಿದ್ದಾರೆ ಎಂದು ದುಂಗರಪುರ ಜಿಲ್ಲಾಧಿಕಾರಿ ಕಾನಾ ರಾಮ್ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಮಧ್ಯೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಚಳವಳಿಗಾರರಿಗೆ ಮನವಿ ಮಾಡಿದ್ದು, ದುಂಗರಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ದುರದೃಷ್ಟಕರ. ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು, ಶಾಂತಿಯುತವಾಗಿ ಬಳಸಬೇಕು. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕೆಂದು ನಾನು ಎಲ್ಲ ಪ್ರತಿಭಟನಕಾರರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

10 ಸದಸ್ಯರ ಸಮಿತಿಯು ಪ್ರತಿಭಟನಾ ನಿರತ ಬುಡಕಟ್ಟು ಜನಾಂಗದವರೊಂದಿಗೆ ಚರ್ಚಿಸಲು ಪ್ರಯತ್ನಿಸಿದರೂ, ಇನ್ನೂ ಪ್ರಗತಿ ಕಂಡುಬಂದಿಲ್ಲ.
ರಾಜಸ್ಥಾನದ ಬುಡಕಟ್ಟು ಯುವಕರು ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕರಿಗೆ ರಾಜಸ್ಥಾನದ ಅರ್ಹತಾ ಪರೀಕ್ಷೆ (ಆರ್‌ಇಇಟಿ) ಮೂಲಕ ರಾಜ್ಯದಲ್ಲಿ ನೇಮಕಾತಿಗಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group