ರಾಷ್ಟ್ರೀಯ ಸುದ್ದಿ

ಭಾರತದಲ್ಲಿ ಮೊದಲ ಬಾರಿಗೆ ವಿಮಾನದೊಳಗೆ ಮೊಬೈಲ್ ಸೇವೆ!

ವರದಿಗಾರ (ಸೆ.25): ಜಿಯೋ ಹಾಗೂ ಪ್ಯಾನಸೊನಿಕ್ ಏವಿಯೋನಿಕ್ಸ್ ಕಾರ್ಪೊರೇಷನ್ ಅಂಗ ಸಂಸ್ಥೆಯಾದ ಏರೋಮೊಬೈಲ್ ಸಹಯೋಗದೊಂದಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಮಾನದೊಳಗೆ ಸೇವೆ (In- flight services) ದೊರೆಯಲಿದೆ. ಇದು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರಿಗೆ ಈ ಸೇವೆ ಸಿಗಲಿದೆ.

ವಿದೇಶಗಳಿಗೆ ತೆರಳುವ ಭಾರತೀಯರಿಗೆ ವಿಮಾನದೊಳಗೆ ಧ್ವನಿ ಹಾಗೂ ಡೇಟಾ ಸೇವೆ, ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಆ ಮೂಲಕ ತಮ್ಮ ಪ್ರೀತಿಪಾತ್ರರ ಜತೆಗೆ ನಿರಂತರ ಸಂಪರ್ಕದಲ್ಲಿ ಇರಬಹುದು. ಸದ್ಯಕ್ಕೆ, ವಿದೇಶಗಳಿಗೆ ತೆರಳುವ ವೇಳೆ ಭಾರತೀಯರಿಗೆ ಈ ಸೇವೆ ದೊರೆಯಲಿದೆ. ಒಮ್ಮೆ ಭಾರತದ ವಾಯು ಪ್ರದೇಶದಲ್ಲೂ ಈ ಸೇವೆ ಸಿಗಲು ಶುರುವಾದರೆ ಜಿಯೋದ ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಆಗ ಭಾರತದಲ್ಲಿ ವಿಮಾನದೊಳಗೆ ಇದ್ದರೂ ಸಂಪರ್ಕದಲ್ಲೇ ಇರುತ್ತಾರೆ.

ವಿಮಾನದೊಳಗೆ ರೋಮಿಂಗ್ ಸೇವೆ ಜತೆ ಬರುತ್ತಿರುವ ಮೊದಲ ಭಾರತೀಯ ಆಪರೇಟರ್ ಜಿಯೋ. ಈ ಅಗ್ಗಳಿಕೆಯು ಮಾರುಕಟ್ಟೆಯಲ್ಲಿ ಹೊಸ ಆವಿಷ್ಕಾರ ತರುವಲ್ಲಿ ಹಾಗೂ ತಂತ್ರಜ್ಞಾನ ವಿಚಾರದಲ್ಲಿ ಜಿಯೋ ಸದಾ ಮುಂದು ಎಂಬುದನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಹತ್ತಿರ ಹತ್ತಿರ 40 ಕೋಟಿ ಗ್ರಾಹಕರಿಗೆ ಹೆಚ್ಚಿನ ಮೌಲ್ಯ, ಸ್ಪರ್ಧಾತ್ಮಕ ದರದೊಂದಿಗೆ, ಅದ್ಭುತ ಅನುಭವ ನೀಡಲಿದೆ.

ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಮಾತನಾಡಿ, ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರಿಗೆ ಅತ್ಯುತ್ಕೃಷ್ಟ ಅನುಭವ ನೀಡುತ್ತದೆ. ಇದೀಗ ಏರೋಮೊಬೈಲ್ ಸಹಯೋಗದೊಂದಿಗೆ ವಿಮಾನದೊಳಗೆ ರೋಮಿಂಗ್ ಸೇವೆ ನೀಡಲಿದ್ದೇವೆ. ಅದು ಕೂಡ ಅತ್ಯಾಕರ್ಷಕ ದರದಲ್ಲಿ. ನಮ್ಮ ಗ್ರಾಹಕರಿಗೆ ಈ ಹೊಸ ಸೇವೆ ನೀಡಲು ಸಂತೋಷವಾಗುತ್ತಿದೆ. 20 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸುವಾಗಲೂ ಅಡೆತಡೆ ಇಲ್ಲದೆ, ಅತ್ಯುತ್ತಮ ಗುಣಮಟ್ಟದ ಹಾಗೂ ಸುರಕ್ಷಿತ ರೋಮಿಂಗ್ ಅನುಭವವನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಪ್ಯಾನಸೊನಿಕ್ ಏವಿಯೋನಿಕ್ಸ್ ಮೊಬಿಲಿಟಿ ನಿರ್ದೇಶಕ, ಏರೊಮೊಬೈಲ್ ಸಿಇಒ ಕೆವಿನ್ ರೋಜರ್ಸ್ ಮಾತನಾಡಿ, ಜಿಯೋ ಜತೆಗೆ ಸಹಭಾಗಿತ್ವ ಸಂತಸ ತಂದಿದೆ. ನಮ್ಮ ಸಂಪರ್ಕ ಸೇವೆ ಭಾರತದಾದ್ಯಂತ ವಿಸ್ತರಣೆ ಆಗಲಿದೆ. ಈ ಹೊಸ ವಿಮಾನದೊಳಗಿನ ರೋಮಿಂಗ್ ವ್ಯವಸ್ಥೆ ಜತೆಗೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರು ಪ್ರಯಾಣದ ವೇಳೆಯೂ ಸಂಪರ್ಕದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಈ ಹೊಸ ಸೇವೆಯು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬ ಬದ್ಧತೆಯನ್ನು ತೋರುತ್ತದೆ ಎಂದಿದ್ದಾರೆ.
ಯಾವಾಗ ಹಾಗೂ ಹೇಗೆ ಬಳಕೆ: ವಿಮಾನವು (ಸಪೋರ್ಟ್ ಮಾಡಿದಲ್ಲಿ) 20 ಸಾವಿರ ಅಡಿ ಅಥವಾ ಅದಕ್ಕಿಂತ ಎತ್ತರಕ್ಕೆ ತಲುಪಿದ ಮೇಲೆ ಬಳಕೆ ಶುರು ಮಾಡಬಹುದು.

ಸ್ಮಾರ್ಟ್ ಫೋನ್ ಸ್ವಿಚ್ ಆನ್ ಮಾಡಬೇಕು ಹಾಗೂ ಏರೋಪ್ಲೇನ್ ಮೋಡ್ ಸ್ವಿಚ್ ಆಫ್ ಆಗಬೇಕು. ಮೊಬೈಲ್ ಫೋನ್ ತಾನಾಗಿಯೇ ಏರೋಮೊಬೈಲ್ ನೆಟ್ ವರ್ಕ್ ಸಂಪರ್ಕಕ್ಕೆ ಬರುತ್ತದೆ. ಆಯಾ ಮೊಬೈಲ್ ಹ್ಯಾಂಡ್ ಸೆಟ್ ಗೆ ತಕ್ಕಂತೆ ನೆಟ್ ವರ್ಕ್ ಹೆಸರು ಬದಲಾಗಬಹುದು. ಒಂದು ವೇಳೆ ಮೊಬೈಲ್ ಫೋನ್ ತಾನಾಗಿಯೇ ಏರೋಮೊಬೈಲ್ ನೆಟ್ ವರ್ಕ್ ಸಂಪರ್ಕಕ್ಕೆ ಬಾರದಿದ್ದಲ್ಲಿ’, ಫೋನ್ ಸೆಟ್ಟಿಂಗ್ ನಲ್ಲಿ ‘ಕ್ಯಾರಿಯರ್’ಗೆ ತೆರಳಿ, ಮ್ಯಾನ್ಯುಯಲ್ ಆಗಿ ಏರೋಮೊಬೈಲ್ ಆಯ್ಕೆ ಮಾಡಿಕೊಳ್ಳಬೇಕು. ಡೇಟಾ ಸೇವೆ ಬಳಸಬೇಕು ಎಂದಾದಲ್ಲಿ ಡೇಟಾ ರೋಮಿಂಗ್ ಆನ್ ಆಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.ಒಂದು ಸಲ ಕನೆಕ್ಟ್ ಆದ ಮೇಲೆ ಸ್ವಾಗತ ಸಂದೇಶ ಹಾಗೂ ಇತರ ಮಾಹಿತಿ ಬರುತ್ತದೆ. ಈಗ ಮೊಬೈಲ್ ಫೋನ್ ನಿಂದ ಕರೆ ಮಾಡಬಹುದು, ಸಂದೇಶ ಕಳುಹಿಸಬಹುದು, ಇಮೇಲ್ ಮಾಡಬಹುದು ಹಾಗೂ ಇಂಟರ್ನೆಟ್ ಬ್ರೌಸಿಂಗ್ ಕೂಡ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group