ರಾಷ್ಟ್ರೀಯ ಸುದ್ದಿ

ಕೃಷಿ ಸಂಬಂಧಿತ ತಿದ್ದುಪಡಿ ಮಸೂದೆಗಳಿಗೆ ಬಿಜೆಪಿ ನಾಯಕರಿಂದಲೇ ವಿರೋಧ

ಕೃಷಿ ಮಸೂದೆ ರೈತರ ವಿರೋಧಿ ಎಂದ ಬಿಜೆಪಿ ಮಾಜಿ ಶಾಸಕರು

ವರದಿಗಾರ (ಸೆ.25): ಹರಿಯಾಣ ಬಿಜೆಪಿ ನಾಯಕರಾದ ಪರಮಿಂದರ್ ಸಿಂಗ್ ಧುಲ್ ಮತ್ತು ರಾಮ್ ಪಾಲ್ ಮಜ್ರಾ ಅವರು ಕೇಂದ್ರದ ಕೃಷಿ ಮಸೂದೆಗಳನ್ನು “ರೈತ ವಿರೋಧಿ” ಎಂದು ಆಕ್ಷೇಪಿಸಿದ್ದು, ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ರೈತರ ಆತಂಕ ವಾಸ್ತವವಾದುದು ಎಂದು ಹೇಳಿದ್ದಾರೆ.

ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ಹಲವು ರೈತ ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ರೈತರ ಧ್ವನಿಯನ್ನು ಕೇಳಬೇಕು ಎಂದು ಇಬ್ಬರು ಮಾಜಿ ಶಾಸಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಮಸೂದೆಗಳು ರೈತ ವಿರೋಧಿ, ಜನ ವಿರೋಧಿಯಾಗಿವೆ. ಈ ಸುಧಾರಣೆಗಳು ರೈತರ ಸುಧಾರಕ ಎಂದೇ ಪರಿಗಣಿಸಲ್ಪಟ್ಟ ಸರ್ ಚೋಟು ರಾಮ್ ಅವರ ಕನಸುಗಳನ್ನು ನುಚ್ಚು ನೂರು ಮಾಡಲಿವೆ. ಅವರು ರೈತರ ಪ್ರಗತಿಯನ್ನು ಬಯಸಿದ್ದರು, ರೈತರ ಮುಖದಲ್ಲಿ ಸಂತೋಷವನ್ನು ಬಯಸಿದ್ದರು. ಆದರೆ ಈ ಕಾಯ್ದೆಗಳು ಅವುಗಳನ್ನು ನುಚ್ಚುನೂರು ಮಾಡಲಿವೆ ಎಂದು ಹೇಳಿದರು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯು ಪ್ರತಿಕೂಲ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಮಾತ್ರ ಸ್ಥಿರವಾಗಿ ಉಳಿದು ಭರವಸೆ ಮೂಡಿಸಿದೆ, ಆದರೆ ಈಗ, ಈ ಮಸೂದೆಗಳ ಮೂಲಕ ಈ ಕ್ಷೇತ್ರವನ್ನು ನಾಶ ಮಾಡಲು ಮುಂದಾಗಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರ ಧ್ವನಿಯನ್ನು ಕೇಳಬೇಕು ಎಂದು ಅವರು ಒತ್ತಾಯಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group