ವರದಿಗಾರ ದೆಹಲಿ : ಆಕ್ರಮಿತ ಕಾಶ್ಮೀರದಲ್ಲಿರುವ 73% ಪ್ರಜೆಗಳು ತಮ್ಮನ್ನು ತಾವು ಪಾಕಿಸ್ತಾನಿಗಳೆಂದು ಪರಿಗಣಿಸುವುದಿಲ್ಲ. ‘ಸಿಟಿಝೆನ್ ಪಬ್ಲಿಕ್ ಒಪೀನಿಯನ್’ ಸಮೀಕ್ಷೆಯ ಪ್ರಕಾರ, ಅಲ್ಲಿನ 73% ಜನರು ತಮ್ಮನ್ನು ತಾವು ಕಾಶ್ಮೀರಿಗಳೆಂದು ಪರಿಗಣಿಸುತ್ತಾರೆ.
ಆಡಳಿತ, ಆರ್ಥಿಕ ಸಮಸ್ಯೆಗಳು ಹಾಗೂ ಸಾಮಾಜಿಕ ನೀತಿಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಸುಮಾರು 10000 ಜನರು ಪ್ರತಿಕ್ರಿಯಿಸಿದ್ದರು.
47% ಜನರು ಅಲ್ಲಿನ ಪ್ರಸ್ತುತ ಆಡಳಿತದ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
