ಬಕ್ಸಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್’ನಲ್ಲಿ ಚುನಾವಣೆಗೆ ಸಿದ್ಧತೆ?
‘ರಾಬಿನ್ ಹೂಡ್ ಪಾಂಡೆ’ ಎಂದು ಹೊಗಳಿ ಅಟ್ಟಕ್ಕೇರಿಸುವ ಡಿಜೆ ಹಾಡಿಗೆ ಪೊಲೀಸ್ ಫೌಂಡೇಶನ್ ಆಕ್ಷೇಪ!
ವರದಿಗಾರ (ಸೆ.24): ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಬಿಹಾರ ಸರ್ಕಾರ ಮಂಗಳವಾರ ಅಂಗೀಕರಿಸಿದೆ. ಸೆಪ್ಟೆಂಬರ್ 22 ರಿಂದ ಇದು ಅನ್ವಯವಾಗಲಿದೆ. ಹೋಮ್ ಗಾರ್ಡ್ ಡಿಜಿಪಿ ಎಸ್ ಕೆ ಸಿಂಘಾಲ್ ಅವರಿಗೆ ಬಿಹಾರ ಡಿಜಿಪಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಾಂಡೆ ಅವರು ಬಕ್ಸಾರ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅವರಿಗೆ ಬಿಜೆಪಿಯಿಂದ ಟಿಕೆಟ್ ಭರವಸೆ ನೀಡಲಾಗಿದೆ ಎಂದು ವರದಿಯಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಕುರಿತು ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳಿಂದ ಪಾಂಡೆ ಅವರಿಗೆ ರಾಜಕೀಯ ಆಸಕ್ತಿ ಇರುವುದು ಸ್ಪಷ್ಟವಾಗಿತ್ತು. ಸುಶಾಂತ್ ಸಿಂಗ್ ವಿಷಯದಲ್ಲಿ ಪಾಂಡೆ ಮುಂಬೈ ಪೊಲೀಸರನ್ನು ಟೀಕಿಸಿದ್ದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಲು ನಟಿ ರಿಯಾ ಚಕ್ರವರ್ತಿ ಅವರಿಗೆ ಯಾವುದೇ ಹಕ್ಕು ಇಲ್ಲ ಎಂದು ಟೀಕಿಸಿದ್ದರು.
ಹೆಚ್ಚುವರಿ ಕಾರ್ಯದರ್ಶಿ ಗಿರೀಶ್ ಮೋಹನ್ ಠಾಕೂರ್ ಅವರು ಹೊರಡಿಸಿರುವ ಗೃಹ ಇಲಾಖೆಯ ಅಧಿಸೂಚನೆಯಲ್ಲಿ ಸರ್ಕಾರ ಮಂಗಳವಾರ ಪಾಂಡೆಯವರ ವಿಆರ್ ಎಸ್ ಮನವಿಯನ್ನು ಅಂಗೀಕರಿಸಿದೆ ಎಂದು ದೃಢಪಡಿಸಿದೆ. ವಿಆರ್ಎಸ್ ತೆಗೆದುಕೊಳ್ಳಲು ಸರ್ಕಾರ ಮೂರು ತಿಂಗಳ ನೋಟಿಸ್ನ ನಿಯಮಗಳನ್ನು ಸಡಿಲಿಸಿತ್ತು.
A State DGP circulating such video is in poor taste, demeaning his office and uniform. Sets a bad example for his juniors. It is also a violation of the conduct rules. pic.twitter.com/mafwUSf6QA
— Indian Police Foundation (@IPF_ORG) September 24, 2020
2014 ರ ಲೋಕಸಭಾ ಚುನಾವಣೆಗೆ ಮುನ್ನ ಪಾಂಡೆ ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಅವರಿಗೆ ಬಕ್ಸಾರ್ ಲೋಕಸಭಾ ಸ್ಥಾನದಿಂದ ಟಿಕೆಟ್ ನೀಡಲಾಗಿಲ್ಲ. ನಂತರ ಅವರು ತಮ್ಮ ವಿಆರ್ ಎಸ್ ಅರ್ಜಿಯನ್ನು ಹಿಂಪಡೆದುಕೊಂಡಿದ್ದರು.
ಈ ಮಧ್ಯೆ ಡಿಜಿಪಿ ಪಾಂಡೆ ಅವರು ಪೋಸ್ಟ್ ಮಾಡಿರುವ ವಿಡಿಯೋಗೆ ಇಂಡಿಯನ್ ಪೊಲೀಸ್ ಫೌಂಡೇಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ವಿಡಿಯೋದಲ್ಲಿ ತಮ್ಮನ್ನು ತಾವೇ ಹೊಗಳಿಕೊಂಡಿದ್ದು, ಇದು ಕೆಟ್ಟ ಅಭಿರುಚಿಯ ಪೊಲೀಸ್ ಸಮವಸ್ತ್ರ ಮತ್ತು ಪೊಲೀಸ್ ಹುದ್ದೆಗೆ ಅಗೌರವ ತರುವ ಕೆಲಸವಾಗಿದೆ. ಇದು ಅವರ ಕಿರಿಯರಿಗೆ ಕೆಟ್ಟ ಸಂದೇಶ ನೀಡಿದಂತಾಗಿದೆ. ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸ್ ಫೌಂಡೇಶನ್ ಟ್ವಿಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
