ರಾಜ್ಯ ಸುದ್ದಿ

ರೈತ ವಿರೋಧಿ ನೀತಿ ವಿರುದ್ಧ ಸೆ.25ರಂದು ರಸ್ತೆ ತಡೆ, ಜೈಲ್ ಭರೋ; ಸೆ.28ರಂದು ಕರ್ನಾಟಕ ಬಂದ್

ರೈತ ದಲಿತ ಕಾರ್ಮಿಕ ಹೋರಾಟದ ಐಕ್ಯ ಹೋರಾಟ ಸಮಿತಿ ತೀರ್ಮಾನ

ವರದಿಗಾರ (ಸೆ.23): ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ ಸುಗ್ರಿವಾಜ್ಞೆ ಗಳನ್ನು ಸಂಸತ್ ಅಂಗೀಕರಿಸಿರುವುದನ್ನು ಖಂಡಿಸಿ ಹಾಗೂ ಕರ್ನಾಟಕ ವಿಧಾನ ಸಭೆಯಲ್ಲಿ ಈ ಸುಗ್ರಿವಾಜ್ಞೆ ಗಳನ್ನು ಮಂಡಿಸಿರುವುದನ್ನು ವಿರೋಧಿಸಿ ಮತ್ತು ಯಾವುದೇ ಕಾರಣಕ್ಕೂ ಈ ಸುಗ್ರಿವಾಜ್ಞೆ ಗಳನ್ನು ಅಂಗೀಕರಿಸದಂತೆ ಒತ್ತಾಯಿಸಿ ರೈತ ದಲಿತ ಕಾರ್ಮಿಕ ಹೋರಾಟದ ಐಕ್ಯ ಹೋರಾಟ ಸಮಿತಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿಂದು ಸಭೆ ಸೇರಿದ ಸಂಘಟನೆಯ ಪದಾಧಿಕಾರಿಗಳು, ಸೆಪ್ಟಂಬರ್ 25ರಂದು ರಾಜಧಾನಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಸ್ಥಳದಲ್ಲಿ ಬೆಳಗ್ಗೆ 10-30 ಗಂಟೆಗೆ ಐಕ್ಯ ಹೋರಾಟದ ಎಲ್ಲಾ ಸಂಘಟನೆಗಳು ರಸ್ತೆ ತಡೆ ನಡೆಸಲು ತೀರ್ಮಾನಿಸಿದ್ದಾರೆ.

ಅದೇ ದಿನ ರಾಜ್ಯಾದ್ಯಂತ ರಾಜ್ಯ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಜೈಲ್ ಮಾಡಲು ಐಕ್ಯ ಹೋರಾಟದ ಸಂಘಟನೆಗಳಿಗೆ ಕರೆ ನೀಡಲಾಗಿದೆ. ಸೆ.28ರಂದು ಐಕ್ಯ ಹೋರಾಟವು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಿದೆ ಎಂದು ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ಪದಾಧಿಕಾರಿಗಳು ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group