ರಾಷ್ಟ್ರೀಯ ಸುದ್ದಿ

27 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳೊಂದಿಗೆ ಮಣಿಪುರ ಬಿಜೆಪಿ ನಾಯಕನ ಬಂಧನ

ವರದಿಗಾರ (ಸೆ.23): ನಾರ್ಕೋಟಿಕ್ಸ್ ಅಂಡ್ ಅಫೇರ್ಸ್ ಆಫ್ ಬಾರ್ಡರ್ (ಎನ್‌ಎಬಿ) ಅಧಿಕಾರಿಗಳು ಬುಧವಾರ, ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಯ ಅಧ್ಯಕ್ಷ ಲುತ್ಖೋಸಿ ಜೌ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ, ಅವರಿಂದ 27 ಕೋಟಿ ರೂ. ಮೌಲ್ಯದ 4.595 ಕೆಜಿ ಹೆರಾಯಿನ್, 28 ಕೆಜಿ ವರ್ಲ್ಡ್ ಈಸ್ ಯುವರ್ಸ್ (ಡಬ್ಲ್ಯುವೈ) ಮಾತ್ರೆಗಳು ಮತ್ತು 57.18 ಲಕ್ಷ ರೂ. ನಗದು ಮತ್ತು 95,000 ರೂ.ಹಳೆಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

21 ಸುತ್ತುಗಳ ಗುಂಡುಗಳಿರುವ 0.32 ಎನ್‌ಪಿಬಿ ಪಿಸ್ತೂಲ್, ಒಂದು ಎಸ್‌ಬಿಬಿಎಲ್ ರೈಫಲ್, ಎರಡು ಗನ್ ಲೈಸೆನ್ಸ್ ಪುಸ್ತಕಗಳು ಮತ್ತು ಎಂಟು ಬ್ಯಾಂಕ್ ಪಾಸ್‌ಬುಕ್‌ಗಳನ್ನು ಕೂಡ ಪೊಲೀಸ್ ತಂಡ ವಶಪಡಿಸಿಕೊಂಡಿದೆ.

ಎಸ್ತರ್ ವುಂಗ್ಹೈನುವಾಮ್, ಮುಂಗ್ ಜೌ ಅರಿಕ್, ತೆರೆಸಾಗೈಟ್ ನೆಂಗ್ಬಾಯಿ, ಲಾರೆನ್ಸ್ ಜೌ, ಮಿನ್ಲಾಲ್ ಮೇಟ್, ಸಿಯೋ ಜಮ್ತಾಂಗ್ ಮೇಟ್ ಮತ್ತು ಕೌನ್ಸಿಲ್ ಅಧ್ಯಕ್ಷರ ಸಾರ್ವಜನಿಕ ಸಂಪರ್ಕಾಧಿಕಾರಿ ಮೌಂಟ್ ಜಮ್ಖೋಹಾವೊ ಬಂಧಿತ ಆರೋಪಿಗಳು.

ಲುಟ್ಖೋಸಿ ಅವರು ಕಳೆದ ವರ್ಷ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ನಂತರ ಅವರು ಬಿಜೆಪಿ ಸೇರಿ ಚಾಂಡೆಲ್‌ನಲ್ಲಿ ಪರಿಷತ್ತು ರಚಿಸಿದರು. ಥಾಂಗ್ಮಿನ್ಲುನ್ ಜೌ ಎಂಬಾತ ನೀಡಿದ ಮಾಹಿತಿ ಅನ್ವಯ, ಪೊಲೀಸ್ ತಂಡವನ್ನು ಲ್ಯಾಂಗೋಲ್ ಗೇಮ್ ಗ್ರಾಮದಲ್ಲಿರುವ ಲುಟ್ಖೋಸಿ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ, ಎರಡು ಸೂಟ್‌ಕೇಸ್‌ಗಳನ್ನು ಅಕ್ರಮವಾಗಿ ನಿಷೇಧಿತ ಡ್ರಗ್ಸ್ ತುಂಬಿರುವುದು ಬೆಳಕಿಗೆ ಬಂದಿದೆ.

ಎರಡು ದೊಡ್ಡ ಸೂಟ್‌ಕೇಸ್‌ಗಳನ್ನು ಸೋಪ್ ಬಾಕ್ಸ್ ಗಳಲ್ಲಿ ತುಂಬಿದ್ದ ದೊಡ್ಡ ಪ್ರಮಾಣದ ಹೆರಾಯಿನ್ ಪುಡಿ, ಪ್ಲಾಸ್ಟಿಕ್ ಚೀಲಗಳು ಮತ್ತು ವರ್ಲ್ಡ್ ಈಸ್ ಯುವರ್ಸ್ (ಡಬ್ಲ್ಯುವೈ) ಆಂಫೆಟಮೈನ್ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group