ರಾಷ್ಟ್ರೀಯ ಸುದ್ದಿ

2017, 2018ರಲ್ಲಿ NSAಯಡಿ ಬಂಧಿತರಾದವರ ಪೈಕಿ ಶೇಕಡಾ 94ರಷ್ಟು ಮಂದಿ ಮಧ್ಯಪ್ರದೇಶ, ಉತ್ತರಪ್ರದೇಶದವರು: ರಾಜ್ಯಸಭೆಯಲ್ಲಿ ಸರ್ಕಾರದ ಹೇಳಿಕೆ

ವರದಿಗಾರ (ಸೆ.22): ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 2017 ಮತ್ತು 2018 ರಲ್ಲಿ ಒಟ್ಟು 1,198 ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ ಶೇಕಡಾ 94ರಷ್ಟು ಮಂದಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದವರು ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ದೇಶದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ದಾಖಲಾದ ಪ್ರಕರಣಗಳ ಬಗ್ಗೆ ಟಿಎಂಸಿ ಸಂಸದ ಸಂತನು ಸೇನ್‌ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಈ ಉತ್ತರ ನೀಡಿದರು.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ದತ್ತಾಂಶವನ್ನು ಸಂಸತ್ತಿನೊಂದಿಗೆ ಹಂಚಿಕೊಂಡ ರೆಡ್ಡಿ, 2017ರಲ್ಲಿ ಕಠಿಣ ಕಾನೂನಿನಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 501 ಜನರನ್ನು ಬಂಧಿಸಲಾಗಿತ್ತು ಮತ್ತು 2018 ರಲ್ಲಿ ಎನ್‌ಎಸ್‌ಎ ಅಡಿಯಲ್ಲಿ 697 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

2017 ರಲ್ಲಿ, ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಒಟ್ಟು ಜನರಲ್ಲಿ ಸುಮಾರು ಶೇಕಡಾ 60ರಷ್ಟು ಮಂದಿ ಮಧ್ಯಪ್ರದೇಶ ರಾಜ್ಯದವರಾಗಿದ್ದಾರೆ. ಆ ವರ್ಷ ಒಟ್ಟು ಎನ್‌ಎಸ್‌ಎ ಅಡಿಯಲ್ಲಿ ಬಂಧಿತರ ಪೈಕಿ ಶೇಕಡಾ 94ರಷ್ಟು ಮಂದಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದವರಾಗಿದ್ದಾರೆ.

2018ರಲ್ಲಿ, ಈ ಕಠಿಣ ಕಾನೂನಿನಡಿಯಲ್ಲಿ ಮಧ್ಯಪ್ರದೇಶದಲ್ಲಿ ಬಂಧಿತರ ಪ್ರಮಾಣ ಶೇಕಡಾ 71ಕ್ಕೆ ಏರಿಕೆಯಾಗಿದೆ. ಆ ವರ್ಷ, ಮಧ್ಯಪ್ರದೇಶ ಮತ್ತು ಯುಪಿ ಒಟ್ಟಾಗಿ 662 ಜನರನ್ನು ವಶಕ್ಕೆ ಪಡೆದಿವೆ. ಇದು ಎನ್ಎಸ್ಎ ಅಡಿಯಲ್ಲಿ ದೇಶದಲ್ಲಿ ನಡೆದ ಒಟ್ಟು ಬಂಧನಗಳ ಪೈಕಿ ಶೇಕಡಾ 95ರಷ್ಟು ಎಂದು ಅಂಕಿಅಂಶ ಹೇಳಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಬ್ಬ ವ್ಯಕ್ತಿಯನ್ನು 12 ತಿಂಗಳವರೆಗೆ ಯಾವುದೇ ಜಾಮೀನು ಇಲ್ಲದೆ ಬಂಧಿಸಬಹುದು. ಮಾತ್ರವಲ್ಲ 10 ದಿನಗಳವರೆಗೆ ಆರೋಪದ ಬಗ್ಗೆ ಬಂಧಿತ ವ್ಯಕ್ತಿಗೆ ತಿಳಿಸುವ ಅಗತ್ಯವಿಲ್ಲ. 2018ರ ‘ಭಾರತದಲ್ಲಿ ಅಪರಾಧ’ ಕುರಿತ ಎನ್‌ಸಿಆರ್‌ಬಿ ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 333, ಯುಪಿಯಲ್ಲಿ 57 ಸೇರಿದಂತೆ 406 ಜನರನ್ನು ಎನ್ ಎಸ್ ಎ ಸಲಹಾ ಮಂಡಳಿ ಬಿಡುಗಡೆ ಮಾಡಿದೆ. ಮಧ್ಯಪ್ರದೇಶದ ಒಟ್ಟು ಬಂಧಿತರಲ್ಲಿ ಶೇ.67.2 ರಷ್ಟು ಮಂದಿ 2018 ರಲ್ಲಿ ಮಂಡಳಿಯಿಂದ ಬಿಡುಗಡೆಯಾಗಿದ್ದು, ಯುಪಿಯಲ್ಲಿ ಮಂಡಳಿಯು ಬಿಡುಗಡೆ ಮಾಡಿದವರ ಶೇಕಡಾ 34ರಷ್ಟು ಇದೆ.

ಮಧ್ಯಪ್ರದೇಶದಲ್ಲಿ 162 ಮತ್ತು ಯುಪಿಯಲ್ಲಿ 110 ಸೇರಿದಂತೆ ಉಳಿದ 291 ಮಂದಿ 2018 ರಲ್ಲಿ ಬಂಧಿತರಾದವರಾಗಿದ್ದಾರೆ.
2017 ರಲ್ಲಿ, ದೇಶದಲ್ಲಿ ಬಂಧನಕ್ಕೊಳಗಾದ ಒಟ್ಟು 501 ಜನರಲ್ಲಿ 229 ಜನರನ್ನು ದೇಶಾದ್ಯಂತ ಮಂಡಳಿಯು ಬಿಡುಗಡೆ ಮಾಡಿದೆ, ಇದರಲ್ಲಿ ಮಧ್ಯಪ್ರದೇಶದ 133 ಮತ್ತು ಉತ್ತರ ಪ್ರದೇಶದ 93 ಮಂದಿ ಸೇರಿದ್ದಾರೆ. ಆ ವರ್ಷ, 162 ಮಂದಿ ಮಧ್ಯಪ್ರದೇಶದ ಮತ್ತು ಯುಪಿಯ 78 ಮಂದಿ ಸೇರಿದಂತೆ 272 ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ಅಂಕಿಅಂಶ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group