ವಿದೇಶ ಸುದ್ದಿ

ಒಮನ್ ನಲ್ಲಿ ಮಾಲ್, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವವರಿಗೆ ನೂತನ ವಸ್ತ್ರಸಂಹಿತೆ!

ವರದಿಗಾರ (ಸೆ.21): ಸ್ಲೀವ್‌ಲೆಸ್ ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಮಸ್ಕತ್‌ನಲ್ಲಿ ಮಾಲ್‌ಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಿದರೆ ಹೊಸ ನಿಯಮಗಳಡಿಯಲ್ಲಿ 300 ಒಮನ್ ರಿಯಾಲ್ ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಸಾರ್ವಜನಿಕವಾಗಿ ಇರುವಾಗ ಧರಿಸಬೇಕಾದ ವಸ್ತ್ರಸಂಹಿತೆಯ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.

ಪುರುಷರು ಮತ್ತು ಮಹಿಳೆಯರಿಗೆ ಈ ನಿಯಮಗಳು ಅನ್ವಯವಾಗಲಿದೆ. ನಗರದ ಮುನ್ಸಿಪಲ್ ಕಮಿಟಿ ಇದನ್ನು ರೂಪಿಸಿ, ಪುರಸಭೆಗೆ ಸಲ್ಲಿಸಿದೆ. ಪುರಸಭೆಯು ಅನುಮೋದನೆಗಾಗಿ ಇದನ್ನು ರಾಯಲ್ ಕೋರ್ಟ್‌ನ ದಿವಾನ್ ನ ಸಚಿವರಿಗೆ ಸಲ್ಲಿಸಲಿದೆ.

ಟೈಮ್ಸ್ ಆಫ್ ಒಮಾನ್ ಜೊತೆ ಮಾತನಾಡಿದ ಮಸ್ಕತ್ ಗವರ್ನರೇಟ್‌ನ ಮುನ್ಸಿಪಲ್ ಕೌನ್ಸಿಲ್‌ನ ಸಾರ್ವಜನಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಖೈಸ್ ಬಿನ್ ಮುಹಮ್ಮದ್ ಅಲ್ ಮಾಶಾರಿ, ವಸ್ತ್ರಸಂಹಿತೆ ನಿಯಮಗಳನ್ನು ಹೆಚ್ಚು ವಿವರವಾಗಿ ನಿಗದಿಪಡಿಸಲಾಗಿಲ್ಲ. ಆದರೂ ದೇಹವನ್ನು ಭುಜದಿಂದ ಮೊಣಕಾಲಿನ ಕೆಳಗಿನವರೆಗೂ ಮುಚ್ಚುವ ವಸ್ತ್ರವಾಗಿರಬೇಕು ಎಂಬುದನ್ನು ನಿಗದಿಪಡಿಸಲಾಗಿದೆ ಎಂದರು.

ಬಟ್ಟೆಯು ದೇಹದ ಅಗತ್ಯವಿರುವ ಎಲ್ಲಾ ಭಾಗಗಳನ್ನು ಸರಿಯಾಗಿ ಮುಚ್ಚುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ದೇಹ ಯಾವುದೇ ಭಾಗವನ್ನು ಬಹಿರಂಗಪಡಿಸುವಂತಿರಬಾರದು. ಅದರ ಮೇಲೆ ಯಾವುದೇ ಸೂಕ್ಷ್ಮ ಚಿತ್ರ ಅಥವಾ ಬರವಣಿಗೆ ಇರಬಾರದು ಎಂದು ಅವರು ಹೇಳಿದರು.

“ಆದಾಗ್ಯೂ, ವೇಲ್ ಅಥವಾ ಶಾಲು ಧರಿಸುವುದನ್ನು ಸಾಧಾರಣ ವಸ್ತ್ರಸಂಹಿತೆಯ ಪರಿಕಲ್ಪನೆಯಲ್ಲಿ ಸೇರಿಸಲಾಗಿಲ್ಲ, ಏಕೆಂದರೆ ಸುಲ್ತಾನೇಟ್ ಬಹುಸಂಸ್ಕೃತಿ, ಸಿದ್ಧಾಂತಗಳು ಮತ್ತು ಧಾರ್ಮಿಕ ಸಹಿಷ್ಣುತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ” ಎಂದು ಮಾಶಾರಿ ಹೇಳಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group