ರಾಷ್ಟ್ರೀಯ ಸುದ್ದಿ

5 ವರ್ಷಗಳಲ್ಲಿ ಬಾಂಗ್ಲಾದೇಶದ 15,000 ಜನರಿಗೆ ಭಾರತದ ಪೌರತ್ವ: ಲೋಕಸಭೆಗೆ ಸರ್ಕಾರದ ಮಾಹಿತಿ

ಬಾಂಗ್ಲಾದೇಶದ 15,000 ಜನರಿಗೆ ಭಾರತದ ಪೌರತ್ವ

86,756 ಮಂದಿ ವಿದೇಶಿಯರೆಂದು ಘೋಷಣೆ

ವರದಿಗಾರ (ಸೆ.21): ಕಳೆದ ಐದು ವರ್ಷಗಳಲ್ಲಿ ಬಾಂಗ್ಲಾದೇಶದ 15,000 ಜನರಿಗೆ ಭಾರತದ ಪೌರತ್ವ ನೀಡಲಾಗಿದೆ. “ಅನುಮಾನಾಸ್ಪದ ಮತದಾರರು” ಎಂದು ಘೋಷಿಸಲ್ಪಟ್ಟ 83,008 ಪ್ರಕರಣಗಳು ಅಸ್ಸಾಂನ ವಿದೇಶಾಂಗ ನ್ಯಾಯಮಂಡಳಿಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಗೃಹ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ 86,756 ಜನರನ್ನು ವಿದೇಶಿಯರು ಎಂದು ಘೋಷಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

“ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯಲ್ಲಿ 83,003 ಅನುಮಾನಾಸ್ಪದ ಮತದಾರರ ಪ್ರಕರಣಗಳು ಬಾಕಿ ಉಳಿದಿವೆ. 2015 ರಿಂದ 2020 ರ ಜೂನ್ 30 ರವರೆಗೆ ಅಸ್ಸಾಂನಲ್ಲಿ ವಿದೇಶಿಯರು ಎಂದು ಘೋಷಿಸಲ್ಪಟ್ಟವರ ಸಂಖ್ಯೆ 86,756ಕ್ಕೆ ಏರಿಕೆಯಾಗಿದೆ” ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ವಿದೇಶಾಂಗ ನ್ಯಾಯಮಂಡಳಿಗಳು ಅಸ್ಸಾಂನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಅಕ್ರಮ ವಲಸಿಗರನ್ನು ಅಥವಾ ಶಿಕ್ಷೆಯನ್ನು ಪೂರ್ಣಗೊಳಿಸಿದ ವಿದೇಶಿಯರನ್ನು ಬಂಧಿಸಲು ತಮ್ಮ ದೇಶಕ್ಕೆ ಗಡೀಪಾರು ಮಾಡಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಂಧನ ಕೇಂದ್ರಗಳನ್ನು ಸ್ಥಾಪಿಸಿವೆ ಎಂದು ಹೇಳಿದರು.

ಈ ಬಂಧನ ಕೇಂದ್ರಗಳಲ್ಲಿ ಬಂಧನಕ್ಕೊಳಗಾದ ವಿದೇಶಿ ಪ್ರಜೆಗಳ ಸಂಖ್ಯೆಯ ಜೊತೆಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಆಡಳಿತಗಳು ಸ್ಥಾಪಿಸಿರುವ ಬಂಧನ ಕೇಂದ್ರಗಳ ವಿವರಗಳನ್ನು ಕೇಂದ್ರೀಯವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಅವರು ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group