ರಾಷ್ಟ್ರೀಯ ಸುದ್ದಿ

ಕೊರೊನಾ ವೈರಸ್ ಹರಡಲು ದೆಹಲಿಯಲ್ಲಿ ಮಾರ್ಚ್ ನಲ್ಲಿ ನಡೆದ ತಬ್ಲೀಗ್ ಜಮಾಅತ್ ಸಭೆ ಕಾರಣ; ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ನ್ಯಾಯಾಲಯದ ಹೇಳಿಕೆ ಬೆನ್ನಲ್ಲೇ ಸರ್ಕಾರದ ವಿಭಿನ್ನ ಹೇಳಿಕೆ

ತಬ್ಲೀಗ್ ಜಮಾಅತ್

ವರದಿಗಾರ (ಸೆ.21): ದೇಶದಲ್ಲಿ ಕೊರೋನ ವೈರಸ್ ಕಂಡುಬಂದ ನಂತರ ವಿವಿಧ ಅಧಿಕಾರಿಗಳು ಹೊರಡಿಸಿದ ಆದೇಶಗಳ ಹೊರತಾಗಿಯೂ, ದೆಹಲಿಯಲ್ಲಿ ಮಾರ್ಚ್ ನಲ್ಲಿ ನಡೆದ ಬೃಹತ್ ತಬ್ಲೀಗ್ ಜಮಾಅತ್ ಸಮಾವೇಶದಿಂದಾಗಿ ಕೊರೊನಾ ವೈರಸ್ ಹರಡಲು ಕಾರಣವಾಯಿತು ಎಂದು ಸರ್ಕಾರ ಇಂದು ಸಂಸತ್ತಿಗೆ ತಿಳಿಸಿದೆ.

ಕೊರೊನಾ ಹರಡಿದ ನಂತರ ವಿವಿಧ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳು / ಆದೇಶಗಳ ಹೊರತಾಗಿಯೂ, ಕಟ್ಟಡದ ಒಳಗೆ ಬೃಹತ್ ಸಂಖ್ಯೆಯ ಜನರು ಕೊರೊನಾ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ ಅಥವಾ ಮಾಸ್ಕ್ ಧರಿಸದೆ ಭಾಗವಹಿಸಿದ್ದರಿಂದ ಕೊರೊನಾ ಹರಡಿತು. ಇದು ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಹಲವರಿಗೆ ಕೊರೊನಾ ಸೋಂಕು ಹರಡಲು ಪ್ರಮುಖ ಕಾರಣವಾಯಿತು ಎಂದು ದೆಹಲಿ ಪೊಲೀಸರ ವರದಿ ತಿಳಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ತಬ್ಲೀಗ್ ಜಮಾಅತ್ ಆಯೋಜಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನಂತರ ನೂರಾರು ಸ್ಥಳೀಯರು ಮತ್ತು ವಿದೇಶಿಯರಿಗೆ ಅಥವಾ ಅವರ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಬಂತು ಎಂದು ಅವರು ತಿಳಿಸಿದರು.

ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಕೊರೋನ ವೈರಸ್ ಹರಡಲು ಧಾರ್ಮಿಕ ಸಭೆಯಲ್ಲಿ ಜನರು ಸೇರಿರುವುದು ಕಾರಣವೇ. ಸಭೆಗೆ ಹಾಜರಾದವರ ಸಂಖ್ಯೆ ಮತ್ತು ಇಲ್ಲಿಯವರೆಗೆ ಬಂಧಿಸಲ್ಪಟ್ಟವರ ಸಂಖ್ಯೆಯ ವಿವರಗಳನ್ನೂ ಶಿವಸೇನೆಯ ಸಂಸದ ಅನಿಲ್ ದೇಸಾಯಿ ಕೇಳಿದ ಪ್ರಶ್ನೆಗೆ ಗೃಹ ಸಚಿವಾಲಯ ಉತ್ತರಿಸಿದೆ.

ಮಾರ್ಚ್ 29 ರಂದು ದೆಹಲಿ ಪೊಲೀಸರು ತಬ್ಲೀಗ್ ಜಮಾಅತ್‌ನ 2,361 ಜನರನ್ನು ಸ್ಥಳಾಂತರಿಸಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ತಬ್ಲೀಗ್ ಜಮಾಅತ್‌ನ 233 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ಜಮಾಅತ್ ಮುಖ್ಯಸ್ಥ ಮೌಲಾನಾ ಮುಹಮ್ಮದ್ ಸಾದ್ ಅವರ ವಿರುದ್ಧದ ತನಿಖೆ ನಡೆಯುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

ದೆಹಲಿ ಪೊಲೀಸರು ಈವರೆಗೆ 36 ದೇಶಗಳ 956 ವಿದೇಶಿ ಪ್ರಜೆಗಳ ವಿರುದ್ಧ 59 ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಕೇಂದ್ರವು ಅವರ ವೀಸಾಗಳನ್ನು ರದ್ದುಗೊಳಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದರು.
ವಿದೇಶಿ ಪ್ರಜೆಗಳು ಪ್ರವಾಸಿ ವೀಸಾಗಳಲ್ಲಿ ಭಾರತವನ್ನು ಪ್ರವೇಶಿಸಿ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಚಾರ್ಜ್‌ಶೀಟ್‌ಗಳಲ್ಲಿ ತಿಳಿಸಲಾಗಿದೆ.

ಆದರೆ ಇತ್ತೀಚೆಗೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಸೇರಿದಂತೆ ಹಲವು ನ್ಯಾಯಾಲಯಗಳು ತಬ್ಲಿಗ್ ಜಮಾಅತ್ ಸದಸ್ಯರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿವೆ. ಮಾತ್ರವಲ್ಲ ಅವರನ್ನು ಬಲಿಪಶುಗಳಾಗಿ ಮಾಡಲಾಗಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಸರ್ಕಾರದ ಹೇಳಿಕೆ ಇದಕ್ಕೆ ವ್ಯತಿರಿಕ್ತವಾಗಿದೆ.

20 ವಿದೇಶಿ ತಬ್ಲೀಗ್ ಜಮಾಅತ್ ಸದಸ್ಯರ ಮೇಲಿನ ಗಂಭೀರ ಪ್ರಕರಣ ಹಿಂಪಡೆದ ಮುಂಬೈ ಪೊಲೀಸ್

ವಿದೇಶಿ ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ; ಅವರ ವಿರುದ್ಧದ ಎಲ್ಲಾ ಎಫ್ಐಆರ್ ರದ್ದುಪಡಿಸಿ; ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಆದೇಶ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group