ವರದಿಗಾರ (ಸೆ.20): ಕೃಷಿ ಸಂಬಂಧಿತ ಮಸೂದೆಗಳಿಗೆ ಅನುಮೋದನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ರೈತರನ್ನು ಉದ್ಯಮಿಗಳ ಸೇವಕಕರನ್ನಾಗಿಸಲು ಯತ್ನಿಸುತ್ತಿದ್ದಾರೆ. ಆದರೆ, ನಮ್ಮ ದೇಶ ಎಂದಿಗೂ ಅದಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರದ ತಪ್ಪು ನೀತಿಯಿಂದ ಎಪಿಎಂಸಿ, ಕಿಸಾನ್ ಮಾರುಕಟ್ಟೆ ಅಂತ್ಯಗೊಂಡಾಗ ರೈತರು ಹೇಗೆ ಕನಿಷ್ಠ ಬೆಂಬಲ ದರ ಪಡೆಯುತ್ತಾರೆ? ಏಕೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುತ್ತಿಲ್ಲ? ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿ ಮಾಡುತ್ತಿದೆ. ಇದಕ್ಕೆ ದೇಶ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ರೈತರು ಮೋದಿ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿ ಅವರ ಹೇಳಿಕೆ ಮತ್ತು ಕ್ರಿಯೆಗಳು ಮೊದಲಿನಿಂದಲೂ ಭಿನ್ನವಾಗಿದೆ. ನೋಟು ಅಮಾನ್ಯೀಕರಣ, ತಪ್ಪು ಜಿಎಸ್ ಟಿ ನೀತಿ ಮತ್ತು ಡೀಸೆಲ್ ಮೇಲಿನ ತೆರಿಗೆಗಳು ಸಾಮಾನ್ಯ ಜನರಿಗೆ ಕಷ್ಟ ನೀಡಿದೆ. ಈ ಕಾಯ್ದೆ ಮೂಲಕ ಮೋದಿ ತಮ್ಮ ಸ್ನೇಹಿತರ ಕೃಷಿ ಆದಾಯವನ್ನು ಹೆಚ್ಚಿಸುತ್ತಾರೆ ಮತ್ತು ರೈತರ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಹರಿಹಾಯ್ದಿದಿದ್ದಾರೆ ನಡೆಸಿದ್ದಾರೆ.
