ರಾಷ್ಟ್ರೀಯ ಸುದ್ದಿ

20 ವಿದೇಶಿ ತಬ್ಲೀಗ್ ಜಮಾಅತ್ ಸದಸ್ಯರ ಮೇಲಿನ ಗಂಭೀರ ಪ್ರಕರಣ ಹಿಂಪಡೆದ ಮುಂಬೈ ಪೊಲೀಸ್

ವರದಿಗಾರ (ಸೆ.20): ತಬ್ಲೀಗ್ ಜಮಾಅತ್ ನ 20ವಿದೇಶಿಯವರ ಮೇಲೆ ದಾಖಲಾಗಿದ್ದ ಗಂಭೀರ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮನಪೂರ್ವಕವಲ್ಲದ ನರಹತ್ಯೆ, ಕೊಲೆ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಅವರ ಮೇಲೆ ದಾಖಲಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ವೀಸಾ ನಿಯಮ ಉಲ್ಲಂಘನೆ, ಲಾಕ್ ಡೌನ್ ನಿಯಮ ಉಲ್ಲಂಘನೆಯಂತಹ ಪ್ರಕರಣಗಳ ತನಿಖೆ ಮುಂದುವರಿಯಲಿದೆ.

ಏಪ್ರಿಲ್ ತಿಂಗಳಲ್ಲಿ 10 ಮಂದಿ ಇಂಡೋನೇಷ್ಯ ಪ್ರಜೆಗಳು ಮತ್ತು ಕಿಗ್ರಿಸ್ತಾನ್ ಪ್ರಜೆಗಳ ಮೇಲೆ ಮುಂಬೈನ ಡಿ.ಎನ್. ನಗರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐಆರ್ ದಾಖಲಾಗಿತ್ತು. ಈ ಎರಡೂ ಪ್ರಕರಣಗಳನ್ನು ಮತ್ತೊಂದು ನ್ಯಾಯಾಲಯ ಒಟ್ಟಾಗಿ ವಿಚಾರಣೆ ನಡೆಸಬೇಕು ಎಂದು ಕೋರಿ ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಯನ್ನು ಮೂರು ದಿನಗಳ ಹಿಂದೆ ದಿಂದೋಶಿ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ತಿರಸ್ಕರಿಸಿದ್ದರು.

ನರಹತ್ಯೆ, ಕೊಲೆ ಮುಂತಾದ ಪ್ರಕರಣಗಳನ್ನು ತಮ್ಮ ವೃಥಾ ದಾಖಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಉತ್ತರಿಸಿದ್ದ ಮುಂಬೈ ಪೊಲೀಸರು, ವಿದೇಶಿ ಪ್ರಜೆಗಳ ವಿರುದ್ಧದ ಗಂಭೀರವಾದ ನರಹತ್ಯೆ, ಕೊಲೆ ಪ್ರಕರಣಗಳನ್ನು ಕೈಬಿಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಳೆದ ತಿಂಗಳು, ಬಾಂದ್ರಾ ಪೊಲೀಸರು 12 ಇಂಡೋನೇಷ್ಯಾದ ಪ್ರಜೆಗಳ ವಿರುದ್ಧ ಎರಡು ಪ್ರಕರಣಗಳನ್ನು ಕೈಬಿಟ್ಟಿದ್ದರು, ನಗರದಲ್ಲಿ ಕೋವಿಡ್ -19 ಹರಡಲು ಮತ್ತು ಕೊರೊನಾ ಸಾವಿಗೆ ಅವರು ಕಾರಣರು ಎಂಬ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಫೆಬ್ರವರಿ-ಮಾರ್ಚ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ತಬ್ಲೀಗ್ ಜಮಾಅತ್ ಸದಸ್ಯರ ವಿರುದ್ಧ ಅದರಲ್ಲೂ ಮುಖ್ಯವಾಗಿ ವಿದೇಶಿ ಪ್ರಜೆಗಳ ವಿರುದ್ಧ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ಕಳೆದ ತಿಂಗಳು, ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ನ್ಯಾಯಪೀಠವು 29 ವಿದೇಶಿ ಪ್ರಜೆಗಳ ವಿರುದ್ಧ ಸಲ್ಲಿಸಿದ ಎಫ್‌ಐಆರ್‌ಗಳನ್ನು ರದ್ದುಪಡಿಸಿತು. ಮಾತ್ರವಲ್ಲ ಅವರು ನಿಯಮ ಉಲ್ಲಂಘಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತ್ತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರನ್ನು ಸಂವೇದನಾಶೀಲವಾಗಿ ನಡೆಸಿಕೊಳ್ಳುವುದರ ಬದಲು ಅವರನ್ನು ‘ಬಲಿಪಶುಗಳನ್ನಾಗಿ ಮಾಡಿ ಜೈಲಿಗೆ ಹಾಕಲಾಯಿತು ಎಂದು ಬೇಸರ ವ್ಯಕ್ತಪಡಿಸಿತ್ತು.

ನಾಂದೇಡ್‌ನಲ್ಲಿ ಇದೇ ರೀತಿಯ ಪ್ರಕರಣವೊಂದರಲ್ಲಿ, ಜೂನ್‌ನಲ್ಲಿ ನ್ಯಾಯಾಲಯವು ಹತ್ತು ಮಂದಿ ಇಂಡೋನೇಷ್ಯಾದ ಪ್ರಜೆಗಳ ವಿರುದ್ಧ ವೀಸಾ ಉಲ್ಲಂಘನೆಯ ಆರೋಪವನ್ನು ಕೈಬಿಡಬೇಕೆಂದು ಆದೇಶ ನೀಡಿತ್ತು. ನವೀ ಮುಂಬೈ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಎಂಟು ಫಿಲಿಪೈನ್ಸ್ ಪ್ರಜೆಗಳನ್ನು ಬಿಡುಗಡೆ ಮಾಡಿತ್ತು. ಆದರೆ ಬಾಂದ್ರಾ ಗುಂಪಿನ ಅರ್ಜಿಯ ಇತ್ಯರ್ಥ ಇನ್ನೂ ಬಾಕಿ ಇದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group