ವರದಿಗಾರ (ಸೆ.19): ದಕ್ಷಿಣ ರೈಲ್ವೆಯಲ್ಲಿ 2018ರಲ್ಲಿ ನಡೆದ ತಾಂತ್ರಿಕ ಹಾಗೂ ಎಂಜಿನೀಯರ್ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಸುಮಾರು ಶೇ.೪೯.೫ರಷ್ಟು ಹಿಂದಿ ಭಾಷಿಕ ರಾಜ್ಯಗಳ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಲೋಕಸಭೆಯಲ್ಲಿ ಗುರುವಾರ ಮಧುರೈ ಸಂಸದ ಎಸ್.ವೆಂಕಟೇಶನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರೀಯ ರೈಲ್ವೆ ಸಚಿವ ಪಿಯೂಶ್ ಗೋಯಲ್ ಈ ಕುರಿತು ಮಾಹಿತಿ ಒದಗಿಸಿದರು.
ದಕ್ಷಿಣ ರೈಲ್ವೆ ತಾಂತ್ರಿಕ ಹಾಗೂ ಎಂಜಿನೀಯರ್ ಹುದ್ದೆಗಳಿಗೆ ನೇಮಕಗೊಂಡ ಒಟ್ಟು 3730 ಅಭ್ಯರ್ಥಿಗಳಲ್ಲಿ 1846 ಜನ ಹಿಂದಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಇನ್ನುಳಿದ 536(ಶೇ.14) ಅಭ್ಯರ್ಥಿಗಳು ಮಲಯಾಳಂ, 407(ಶೇ.10.9)ಅಭ್ಯರ್ಥಿಗಳು ತಮಿಳು ಹಾಗೂ ಕೇವಲ 517 (ಶೇ.13.8) ಅಭ್ಯರ್ಥಿಗಳು ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆದು ಆಯ್ಕೆಗೊಂಡಿದ್ದಾರೆ.
ದಕ್ಷಿಣ ರೈಲ್ವೆಯ ವ್ಯಾಪ್ತಿಯು ತಮೀಳುನಾಡು, ಕೇರಳ, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕೆಲ ಜಿಲ್ಲೆಗಳನ್ನು ಒಳಗೊಂಡಿದೆ.
ಇದಕ್ಕೂ ಮೊದಲು ಇದೇ ರೀತಿಯ ವಿವಾದ ತಿರುಚಿಯ ಗೋಲ್ಡನ್ ರಾಕ್ ವರ್ಕ್ಶಾಪ್ ನೇಮಕಾತಿಯಲ್ಲೂ ಸೃಷ್ಟಿಯಾಗಿತ್ತು. ಇದಕ್ಕೆ ದಕ್ಷಿಣ ರಾಜ್ಯಗಳ ಉದ್ಯೋಗ ಆಕಾಂಕ್ಷಿಗಳು ಎಂಜಿನೀಯರಿಂಗ್ ಹಾಗೂ ಡಿಪ್ಲೋಮಾದಂತಹ ಉನ್ನತ ಶಿಕ್ಷಣ ಪೂರೈಸಿದ್ದವರಾಗಿದ್ದಾರೆ. ಅದಕ್ಕಾಗಿ ಅವರನ್ನು ನೇಮಕಕ್ಕೆ ಪರಿಗಣಿಸಿಲ್ಲ ಎಂದು ರೈಲ್ವೆ ಉತ್ತಿರಿಸಿತ್ತು. ರೈಲ್ವೆ ನೇಮಕಾತಿ ಸಮಿತಿಯ ನಿಯಮಗಳ ಪ್ರಕಾರ ನಿಗದಿಪಡಿಸಿದ ಶಿಕ್ಷಣಕ್ಕಿಂತ ಉನ್ನತ ಶಿಕ್ಷಣ ಹೊಂದಿದ ಅಭ್ಯರ್ಥಿಗಳನ್ನು ನೇಮಕಕ್ಕೆ ಪರಿಗಣಿಸಲಾಗುವುದಿಲ್ಲ.
