ರಾಷ್ಟ್ರೀಯ ಸುದ್ದಿ

ಸೂಕ್ಷ್ಮ ಮಾಹಿತಿ ಪಡೆಯಲು ಪತ್ರಕರ್ತನಿಗೆ ಹಣ ನೀಡಿದ ಚೀನಾ ಮಹಿಳೆ, ನೇಪಾಳಿ ಸಹವರ್ತಿಯ ಬಂಧನ

ವರದಿಗಾರ (ಸೆ.19): ಚೀನಾ ಗುಪ್ತಚರಕ್ಕೆ ಸೂಕ್ಷ್ಮ ಮಾಹಿತಿ ರವಾನಿಸಲು ಫ್ರಿಲ್ಯಾನ್ಸ್ ಪತ್ರಕರ್ತರೊಬ್ಬರಿಗೆ ದೊಡ್ಡ ಮೊತ್ತದ ಹಣ ನೀಡಿದ ಚೀನಾ ಮಹಿಳೆ ಹಾಗೂ ಆಕೆಯ ನೇಪಾಳಿ ಸಹವರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಇವರಿಬ್ಬರನ್ನು ಬಂಧಿಸಿದ ದೆಹಲಿ ಪೊಲೀಸರು, ಚೀನಾ ಗುಪ್ತಚರಕ್ಕೆ ಸೂಕ್ಷ್ಮ ಮಾಹಿತಿ ರವಾನಿಸಲು ಫ್ರಿಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರಿಗೆ ದೊಡ್ಡ ಮೊತ್ತದ ಹಣ ಪಾವತಿಸುತ್ತಿದ್ದರು ಎಂದು ಹೇಳಿದ್ದಾರೆ.

ಚೀನಾ ಗುಪ್ತಚರಕ್ಕೆ ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದಡಿ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಕೂಡ ವಿಶೇಷ ತಂಡ ಬಂಧಿಸಿದ್ದು, ಶೆಲ್ ಕಂಪನಿಗಳ ಮೂಲಕ ಹಣ ರವಾನುಸುತ್ತಿದ್ದ ಚೀನಾದ ಮಹಿಳೆ ಹಾಗೂ ಆಕೆಯ ನೇಪಾಳಿ ಸಹವರ್ತಿಯನ್ನು ಬಂಧನಕ್ಕೆ ಒಳಪಡಿಸಿದ್ದಾರೆ.

ಚೀನಾದ ಗುಪ್ತಚರವೂ ದೊಡ್ಡ ಮೊತ್ತದ ಹಣದ ಬದಲಾಗಿ ಸೂಕ್ಷ್ಮ ಮಾಹಿತಿಯನ್ನು ರವಾನಿಸುವ ಜವಾಬ್ದಾರಿಯನ್ನು ಪತ್ರಕರ್ತನಿಗೆ ವಹಿಸಿತ್ತು. ಇಬ್ಬರನ್ನು ಬಂಧಿಸಿದ ಪೊಲೀಸರು ಅವರಿಂದ ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಸಂವೇದನಶೀಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group