ರಾಷ್ಟ್ರೀಯ ಸುದ್ದಿ

ಧಾರ್ಮಿಕ ಪುಸ್ತಕ ವಿತರಣೆ ಆರೋಪ; ಸಚಿವ ಕೆ.ಟಿ.ಜಲೀಲ್ ವಿರುದ್ಧ ಪ್ರಕರಣ ದಾಖಲು

ವರದಿಗಾರ (ಸೆ.18): ಕೇರಳದಲ್ಲಿ ಧಾರ್ಮಿಕ ಪಠ್ಯಪುಸ್ತಕಗಳ ವಿತರಣೆ ಮಾಡಿದ ಆರೋಪದಲ್ಲಿ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್‌ ವಿರುದ್ಧ ಕಸ್ಟಮ್‌ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಈ ಪುಸ್ತಕಗಳು ರಾಜತಾಂತ್ರಿಕ ಮೂಲದಿಂದ ಆಗಮಿಸಿದ್ದು, ಅವುಗಳನ್ನು ರಾಜ್ಯದಲ್ಲಿ ವಿತರಿಸುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪಠ್ಯಪುಸ್ತಕಗಳು ಯುನೈಟೆಡ್‌ ಅರಬ್‌ ರಾಷ್ಟ್ರಗಳಿಂದ ರಾಜತಾಂತ್ರಿಕ ಮಾಧ್ಯಮದ ಮೂಲಕ ತರಿಸಲಾಗಿತ್ತು. ಈ ಕುರಿತು ತನಿಖೆ ನಡೆಸಲು ಕಸ್ಟಮ್ಸ್‌ ಇಲಾಖೆ ಪ್ರತ್ಯೇಕ ತಂಡ ರಚಿಸಿದೆ. ಇದರೊಂದಿಗೆ 17,000 ಕೆಜಿ ಕರ್ಜೂರ ಕೂಡ ಆಗಮಿಸಿದ್ದು, ಅದನ್ನು ರಾಜ್ಯಾದ್ಯಂತ ವಿತರಿಸಲಾಗಿದೆ.

ರಾಜತಾಂತ್ರಿಕರಿಗೆ ತಮ್ಮೊಂದಿಗೆ ಆಹಾರ ಮತ್ತು ಕುಡಿಯುವ ನೀರನ್ನು ತರಲು ಅನುಮತಿ ನೀಡಲಾಗಿತ್ತು. ಆದರೆ, ಅವರು ಇತರ ವಸ್ತುಗಳನ್ನು ಕೂಡ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group