ವರದಿಗಾರ (ಸೆ.18): ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಯಂ ಆಪ್ ಅನ್ನು ತೆಗೆದು ಹಾಕಲಾಗಿದೆ.
ತಮ್ಮ ವೇದಿಕೆಯಲ್ಲಿ ಜೂಜು ಆಟಕ್ಕೆ ಯಾವುದೇ ಅವಕಾಶವಿಲ್ಲ. ಈ ಕುರಿತು ಪೇಟಿಯಂ ಜೊತೆಗೆ ಮಾತುಕತೆ ನಡೆದಿದ್ದು, ಅವರಿಂದ ಸ್ಪಷ್ಟನೆ ಬಂದ ಬಳಿಕ ಮಾಹಿತಿ ನೀಡಲಾಗುವುದು ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.
ಆದರೆ ಪೇಟಿಯಂನ ಇತರ ಆಪ್ ಗಳಾದ ಪೇಟಿಯಂ ಫಾರ್ ಬ್ಯುಸಿನೆಸ್, ಪೇಟಿಯಂ ಮಾಲ್, ಪೇಟಿಯಂ ಮನಿ ಇತ್ಯಾದಿ ಗೂಗಲ್ ಪ್ಲೇನಲ್ಲಿ ಮುಂದುವರಿದಿದೆ.
ಕಂಪನಿಯ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಆಟ ಆರಂಭಕ್ಕೂ ಒಂದು ದಿನ ಇರುವಾಗಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ವೇದಿಕೆಯಲ್ಲಿ ಕ್ಯಾಸಿನೋ ಅಥವಾ ಜೂಜಿಗೆ ಅವಕಾಶವಿಲ್ಲ ಎಂದು ಗೂಗಲ್ ಉಪಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
