ವರದಿಗಾರ-ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಧಾರ್ಮಿಕ ವಿದ್ಯಾಸಂಸ್ಥೆಗಳಾದ ಮದರಸಗಳ ಮೇಲೆ ಯೋಗಿ ಆದಿತ್ಯನಾಥ್ ಸರಕಾರವು GPS ಮೂಲಕ ಹದ್ದಿನ ಕಣ್ಣಿಡಲಿದೆ.
ಯೋಗಿ ಸರಕಾರವು ಮದರಸ ತರಗತಿಗಳ ಮ್ಯಾಪ್, ಕಟ್ಟಡದ ಚಿತ್ರ ಹಾಗೂ ಅಧ್ಯಾಪಕರ ಬ್ಯಾಂಕ್ ಖಾತೆಗಳನ್ನು ಕೇಳಿದೆ. ಸಿಬ್ಬಂದಿಗಳ ಆಧಾರ್ ಕಾರ್ಡ್ ವಿವರಗಳನ್ನು ಸರಕಾರದ ವೆಬ್ ಸೈಟ್ (ಪೋರ್ಟಲ್) ನಲ್ಲಿ ಅಪ್ಲೋಡ್ ಮಾಡಲು ಸೂಚಿಸಲಾಗಿದೆ. ಉತ್ತರ ಪ್ರದೇಶದಲ್ಲಿರುವ ಎಲ್ಲಾ 16,000 ಮದರಸಗಳ ಶಿಕ್ಷಣ ಪರಿಷತ್ ನ ರಿಜಿಸ್ಟ್ರಾರ್ ಗೆ ಜಿಯೋ ಟ್ಯಾಗಿಂಗ್ ಮಾಡಿಸಿಕೊಳ್ಳಲು ಯೋಗಿ ಸರಕಾರವು ಆದೇಶ ನೀಡಿದೆ. ಇದರ ನಂತರ ಮದರಸಗಳಿಗೆ ಒಂದು ಕೋಡ್ ಕೊಡಲಾಗುವುದು.
ಅಕ್ಟೋಬರ್ 15 ರೊಳಗೆ ಎಲ್ಲಾ ಮದರಸಗಳನ್ನು ಸರಕಾರ ವೆಬ್ ಸೈಟ್ ನಲ್ಲಿ ( madarsaboard.upsdc.gov.in) ನೊಂದಾಯಿಸಿಕೊಳ್ಳಲು ಆದೇಶಿಸಲಾಗಿದೆ ಎಂದು ಪ್ರಧಾನ ಸಚಿವರಾದ ಮೋನಿಕಾ ಗರ್ಗ್ ಮೂಲಕ ತಿಳಿಸಲಾಗಿದೆ. ಪೋರ್ಟಲ್ ನಲ್ಲಿ ಮದರಸಗಳಿಂದ ನೀಡಿರುವ ಮಾಹಿತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳು ಪರಿಶೀಲಿಸುವರು. ತದನಂತರ ಡೇಟಾದಲ್ಲಿ ಯಾರಿಗೂ ಕೂಡಾ ಯಾವುದೇ ರೀತಿಯ ಬದಲಾವಣೆ ಮಾಡಲು ಅವಕಾಶವಿಲ್ಲ ಎಂದು ಹೇಳಿಕೊಂಡಿದೆ.
ಮುಖ್ಯಮಂತ್ರಿ ಯೋಗಿ ಅಧಿಕಾರ ವಹಿಸಿದ ದಿನದಿಂದ ವಿವಾದಗಳಲ್ಲೇ ಸುದ್ದಿಯಾಗುತ್ತಿದ್ದಾರೆ. ನಿರ್ದಿಷ್ಟ ಸಮುದಾಯಗಳಿಗೆ ಸೇರಿದ್ದ ಕಸಾಯಿಖಾನೆಗಳಿಗೆ ಬೀಗ ಜಡಿಯುವುದು, ಪ್ರತಿಭಟಿಸಿದ ದಲಿತ ಮೋರ್ಚಾ ವಿದ್ಯಾರ್ಥಿಗಳ ಮೇಲೆ ಕಠಿಣ ಸೆಕ್ಷನ್ ಗಳನ್ನು ಹಾಕಿದ್ದು, ತನ್ನದೇ ಕ್ಷೇತ್ರದಲ್ಲಿ ನಡೆದ ಅತಿ ಘೋರ ದುರಂತವಾದ ಗೋರಖ್’ಪುರ ಆಸ್ಪತ್ರೆಯಲ್ಲಿ ನಡೆದ ನೂರಕ್ಕೂ ಮಿಕ್ಕಿ ಮಕ್ಕಳ ಮಾರಣಹೋಮ ಮತ್ತು ಆ ಕುರಿತು ಯೋಗಿಯ ಬೇಜವಬ್ದಾರಿಯುತ ಹೇಳಿಕೆಗಳೆಲ್ಲವೂ ಜೀವಂತವಿರುವಾಗಲೇ ಈಗ ಮದರಸಾದ ಮೇಲೆ ವಿನಾ ಕಾರಣ ಗೂಢಾಚಾರಿಕೆ ನಡೆಸುವ ವಿವಾದಾತ್ಮಕ ತೀರ್ಮಾನಕ್ಕೆ ಕೈ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತರಪ್ರದೇಶ ಮತ್ತೊಂದು ಸುತ್ತಿನ ಬಿಸಿ ಬಿಸಿ ರಾಜಕೀಯ ಚರ್ಚೆಗೆ ಇದು ನಾಂದಿ ಹಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ
