ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶ: ಅಂಬ್ಯುಲೆನ್ಸ್ ಇಲ್ಲದೆ ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ತಂದರೂ ದಾಖಲಿಸಿಕೊಳ್ಳದ ಆಸ್ಪತ್ರೆಯವರು!

ವರದಿಗಾರ (ಸೆ.16): ಅನಾರೋಗ್ಯಪೀಡಿತ 70 ವರ್ಷದ ಮಹಿಳೆಯನ್ನು ಆಂಬುಲೆನ್ಸ್ ಇಲ್ಲದ ಕಾರಣ ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯವರು ಅವರನ್ನು ದಾಖಲಿಸಿಕೊಳ್ಳದೆ ಆಸ್ಪತ್ರೆಯ ಹೊರಗೆ ಕಳುಹಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪತ್ರಕರ್ತ ಪ್ರಶಾಂತ್ ಶುಕ್ಲಾ ಅವರು ಈ ಕುರಿತ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ತಳ್ಳುಗಾಡಿಯ ಮೇಲೆ ಮಹಿಳೆಯೊಬ್ಬರು ಮಲಗಿರುವುದು, ಆಸ್ಪತ್ರೆಯವರು ಬೆಡ್ ಖಾಲಿ ಇಲ್ಲ ಎಂದು ಹೇಳಿ, ಗಾಡಿಯನ್ನು ಗೇಟಿನ ಹೊರಗೆ ನಿಲ್ಲಿಸುವಂತೆ ಸೂಚಿಸುತ್ತಿರುವುದು ಅದರಲ್ಲಿದೆ. ಇದು ಉತ್ತರ ಪ್ರದೇಶದ ಕುರ್ಜಾದಲ್ಲಿರುವ ಶ್ರೀ ಸೂರಜ್ ಮಾಲ್ ಜಾತಿಯಾ ಸರ್ಕಾರಿ ಆಸ್ಪತ್ರೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.

ವೀಡಿಯೋ ವೀಕ್ಷಿಸಿ: 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group