ರಾಷ್ಟ್ರೀಯ ಸುದ್ದಿ

ಕೇರಳದಲ್ಲಿ ಜಾರ್ಜ್ ಫ್ಲಾಯ್ಡ್ ಮಾದರಿ ದಾಳಿ: ಪೊಲೀಸ್ ಕ್ರೂರತೆಗೆ ವ್ಯಾಪಕ ಆಕ್ರೋಶ

angamaly-police-cruelty

ವರದಿಗಾರ (ಸೆ.15): ಅಮೆರಿಕದಲ್ಲಿ ಬಳಿಯ ಪೊಲೀಸ್ ಅಧಿಕಾರಿಯೊಬ್ಬ ಇತ್ತೀಚೆಗೆ ಕಪ್ಪು ವರ್ಣೀಯ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಎಂಬಾತನ ಕುತ್ತಿಗೆಯನ್ನು ಕಾಲಿನಿಂದ ಅದುಮಿ ಕೊಲೈಗೈದ ಘಟನೆಗೆ ಇಡೀ ಜಗತ್ತು ಆಕ್ರೋಶ ವ್ಯಕ್ತಪಡಿಸಿರುವುದು ಈಗ ಇತಿಹಾಸ. ಇದೀಗ ಕೇರಳ ಪೊಲೀಸರು ಇದೇ ಮಾದರಿಯನ್ನು ಅನುಸರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೇರಳ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರ ಕಾರಿಗೆ ಮುಂದೆ ಚಲಿಸಲು ಅನುವು ಮಾಡಿಕೊಡಲು ಪೊಲೀಸ್ ಅಧಿಕಾರಿಯೊಬ್ಬ ಪ್ರತಿಭಟನನಿರತ ಯುವ ಕಾಂಗ್ರೆಸ್ ಕಾರ್ಯಕರ್ತನನ್ನು ನೆಲಕ್ಕೆ ಬೀಳಿಸಿ ಆತನ ಕುತ್ತಿಗೆಗೆ ಕಾಲಿನಿಂದ ಅದುಮಿ ಇಟ್ಟಿರುವ ದೃಶ್ಯ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಅಧಿಕಾರಿಯ ಈ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಮಂದಿ ಅಮೆರಿಕದ ಜಾರ್ಜ್ ಫ್ಲಾಯ್ಡ್ ಅವರನ್ನು ಸ್ಮರಿಸಿದ್ದಾರೆ.

ಇದು ಕೇರಳ ಪೊಲೀಸ್ ಗೆ ನಾಚಿಕೆಗೇಡು ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ, ಪಿ.ಸಿ.ವಿಷ್ಣುನಾಥ ಹೇಳಿದ್ದಾರೆ.
ಅಮೆರಿಕದಲ್ಲಿ ಪೊಲೀಸ್ ಓರ್ವ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನೊಂದಿಗೆ ಕಾಣಿಸಿದ ಕ್ರೂರತೆಯ ಚಿತ್ರ ಮನುಷ್ಯನ ಮನಸಾಕ್ಷಿಯನ್ನೇ ಕದಲುವಂತೆ ಮಾಡಿತ್ತು. ಆಗ ಅಮೆರಿಕನ್ನರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕೇರಳದಲ್ಲೂ ಆಗ ಪೊಲೀಸರ ಕ್ರೂರತೆಯನ್ನು ಖಂಡಿಸಲಾಗಿತ್ತು. ಅಮೆರಿಕ ಪೊಲೀಸ್ ಮುಖ್ಯಸ್ಥರು ಮೊಣಕಾಲೂರಿ ಕ್ಷಮೆಯಾಚಿಸುವ ಘಟನೆಯೂ ನಡೆಯಿತು. ಆದರೆ ಇದೇ ಘಟನೆ ಈಗ ಕೇರಳದಲ್ಲಿ ನಡೆದಿದೆ ಎಂದು ವಿಷ್ಣುನಾಥ್ ಫೇಸ್ ಬುಕ್ ಪೇಜ್ ನಲ್ಲಿ ಫೋಟ್ ಅಪ್ ಲೋಡ್ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾಗಿರುವ ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಭಾನುವಾರ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದಾಗ ಈ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಆಂಟನಿ ಎಂಬವರನ್ನು ಪೊಲೀಸ್ ಅಧಿಕಾರಿಯೊಬ್ಬ ನೆಲಕ್ಕೆ ಬೀಳಿಸಿ ಅವರ ಮೇಲೆ ಕುಳಿತುಕೊಂಡಿರುವುದು ಚಿತ್ರದಲ್ಲಿದೆ. ಜಲೀಲ್ ಅವರ ಕಾರು ಹೋಗುವವರೆಗೂ ಅವರು ಅದೇ ಸ್ಥಿತಿಯಲ್ಲಿ ರಸ್ತೆಯ ಮೇಲೆ ಇದ್ದರು ಎನ್ನಲಾಗಿದೆ.
“ನಾಗರಿಕ ಮತ್ತು ಪಿಣರಾಯಿ ಸರ್ಕಾರ” ಎಂಬ ತಲೆಬರಹದಲ್ಲಿ ಈ ಚಿತ್ರವನ್ನು ಯುವ ಕಾಂಗ್ರೆಸ್ ಶಾಸಕ ವಿ.ಟಿ.ಬಲರಾಂ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

അമേരിക്കയിലെ പോലീസ് ഒരു കറുത്ത വർഗ്ഗക്കാരനോട് കാണിച്ച ക്രൂരതയുടെ ചിത്രം മനുഷ്യ മനസാക്ഷിയെ ഞെട്ടിച്ചിരുന്നു. അമേരിക്കയിലെ…

Posted by Pc vishnunadh on Monday, September 14, 2020

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group