ರಾಷ್ಟ್ರೀಯ ಸುದ್ದಿ

ದೆಹಲಿ ಗಲಭೆಯ ನಿರ್ಣಾಯಕ ಸಂಗತಿಯನ್ನು ಅಡಗಿಸಲು ಫೇಸ್ ಬುಕ್ ಪ್ರಯತ್ನಿಸುತ್ತಿದೆ; ದೆಹಲಿಯ ವಿಧಾನಸಭೆಯ ಸಮಿತಿ

Facebook

ವರದಿಗಾರ (ಸೆ.15): ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ನ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ವಿವರಣೆ ನೀಡಲು ತಮ್ಮ ಮುಂದೆ ಹಾಜರಾಬೇಕು ಎಂದು ಸಮನ್ಸ್ ಕಳುಹಿಸಿದ್ದ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಮುಂದೆ ಮಂಗಳವಾರ ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಗೈರುಹಾಜರಾಗಿದ್ದಾರೆ.

ಹಾಜರಾಗಲು ಸಮಿತಿ ಕಳುಹಿಸಿದ ನೋಟಿಸ್‌ಗೆ ಫೇಸ್‌ಬುಕ್ ಇಂಡಿಯಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸಮಿತಿ ಅಧ್ಯಕ್ಷ ರಾಘವ್ ಚಾಧಾ ಮಂಗಳವಾರ ಆರೋಪಿಸಿದ್ದಾರೆ. ಸಮಿತಿಯ ಮುಂದೆ ಹಾಜರಾಗಲು ನಿರಾಕರಿಸುವುದು ದೆಹಲಿ ವಿಧಾನಸಭೆಯ ಹಕ್ಕುಚ್ಯುತಿಯಾಗುತ್ತದೆ. ಸಮಿತಿಯ ಮುಂದೆ ಹಾಜರಾಗಲು ನೀವು ನಿರಾಕರಿಸುವುದು ಫೆಬ್ರವರಿ 2020ರ ದೆಹಲಿ ಕೋಮು ಹಿಂಸಾಚಾರದಲ್ಲಿ ಫೇಸ್‌ಬುಕ್‌ನ ಪಾತ್ರಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಸಂಗತಿಗಳನ್ನು ಮರೆಮಾಚುವ ಪ್ರಯತ್ನವಾಗಿದೆ. ಫೇಸ್‌ಬುಕ್‌ ಏನನ್ನೋ ಮರೆಮಾಡಲು ಪ್ರಯತ್ನಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಸಮಿತಿಯಿಂದ ತಪ್ಪಿಸಿಕೊಂಡು ಫೇಸ್‌ಬುಕ್ ಓಡಿಹೋಗುತ್ತಿದೆ. ದೆಹಲಿ ಗಲಭೆಗಳಲ್ಲಿ ಫೇಸ್‌ಬುಕ್‌ನ ಪಾತ್ರದ ಕುರಿತಾದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಲ್ಲ ಎಂಬುದು ಇದರಿಂದ ಮನದಟ್ಟಾಗುತ್ತಿದೆ ಎಂದು ರಾಘವ್ ಹೇಳಿದ್ದಾರೆ.

ದ್ವೇಷ ಹರಡಲು ಅವಕಾಶ ಕಲ್ಪಿಸಿರುವುದು ಫೇಸ್‌ಬುಕ್‌ನ ಉದ್ದೇಶಪೂರ್ವಕ ಕೆಲಸವಾಗಿತ್ತೇ ಅಥವಾ ಉದ್ದೇಶಪೂರ್ವಕ ನಿಷ್ಕ್ರಿಯತೆಯಾಗಿತ್ತೇ ಎಂಬುದನ್ನು ಸಮಿತಿ ಪರಿಶೀಲಿಸುತ್ತಿದೆ. ಆಗಸ್ಟ್ 31 ರಂದು, ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಫೇಸ್‌ಬುಕ್‌ಗೆ ಪಾತ್ರವಿದೆ ಎಂದು ತೋರುತ್ತಿದೆ ಮತ್ತು ಅದನ್ನು ಕೂಡ ಸಹ-ಆರೋಪಿ ಎಂದು ಪರಿಗಣಿಸಬೇಕು ಎಂದು ಸಮಿತಿ ಹೇಳಿದೆ.

ಕಳೆದ ವಾರ, ಸಮಿತಿಯು ಸೆ.15ರಂದು ಮಂಗಳವಾರ ಸಮಿತಿಯ ಮುಂದೆ ಹಾಜರಾಗುವಂತೆ ಮೋಹನ್ ಅವರಿಗೆ ನೋಟಿಸ್ ಕಳುಹಿಸಿತ್ತು. ಮಂಗಳವಾರ ಸಭೆ ಸೇರಿದ ಸಮಿತಿಯು ಫೇಸ್‌ಬುಕ್‌ಗೆ “ಅಂತಿಮ ಎಚ್ಚರಿಕೆ” ನೀಡಲು ನಿರ್ಧರಿಸಿದೆ ಮತ್ತು ಸಮಿತಿಯ ಮುಂದೆ ಹಾಜರಾಗಲು ಮೋಹನ್‌ ಅವರಿಗೆ ಇನ್ನೂ ಒಂದು ಅವಕಾಶವನ್ನು ನೀಡಲು ತೀರ್ಮಾನಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group