ರಾಷ್ಟ್ರೀಯ ಸುದ್ದಿ

ಯಾವುದೇ ವಾರಂಟ್ ಇಲ್ಲದೆ, ಎಲ್ಲಿ ಬೇಕಾದರೂ ನುಗ್ಗಿ ಶೋಧ ನಡೆಸುವ, ಬಂಧಿಸುವ ಅಧಿಕಾರ ಉಳ್ಳ ವಿಶೇಷ ಪಡೆ ರಚನೆಗೆ ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ರಾಜಕೀಯ ನಾಯಕರು, ಕಾನೂನು ತಜ್ಞರಿಂದ ಆಕ್ಷೇಪ

ವರದಿಗಾರ (ಸೆ.15): ಯಾವುದೇ ವಾರಂಟ್ ಇಲ್ಲದೆ, ಎಲ್ಲಿ ಬೇಕಾದರೂ ನುಗ್ಗಿ ಶೋಧ ನಡೆಸುವ ಅಥವಾ ಬಂಧಿಸುವ ಅಧಿಕಾರ ಉಳ್ಳ ವಿಶೇಷ ಪಡೆಯನ್ನು ರಚಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಅಪಾಯಕಾರಿ ನಿರ್ಧಾರದ ವಿರುದ್ಧ ರಾಜಕೀಯ, ಸಾಮಾಜಿಕ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರೀಯ ಕೈಗರಿಕಾ ಭದ್ರತಾ ಪಡೆ- ಸಿಐಎಸ್ಎಫ್‌ನಂತೆಯೇ ವಾರಂಟ್‌ ಇಲ್ಲದೇ ಶೋಧಿಸುವ ಹಾಗೂ ಬಂಧಿಸುವ ಅಧಿಕಾರವನ್ನು ಈ ವಿಶೇಷ ಪಡೆ ಹೊಂದಿರಲಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ, ತಡ ರಾತ್ರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಾರಂಭಿಕವಾಗಿ 1,747.06 ಕೋಟಿ ರೂ. ವೆಚ್ಚದಲ್ಲಿ ಯುಪಿಎಸ್‌ಎಸ್‌ಎಫ್‌ನ ಎಂಟು ಬೆಟಾಲಿಯನ್‌ಗಳನ್ನು ರಚಿಸಲಾಗುವುದು. ವಿಶೇಷ ಪಡೆಗೆ ಆರಂಭಿಕ ಮೂಲ ಸೌಕರ್ಯಗಳನ್ನು ಯುಪಿ ಪೊಲೀಸರ ವಿಶೇಷ ಘಟಕವಾದ ಪಿಎಸಿಯಿಂದ ನೀಡಲಾಗುವುದು. ಇದೊಂದು ಮುಖ್ಯಮಂತ್ರಿಯವರ ಕನಸಿನ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಈ ವಿಶೇಷ ಪಡೆಯು ಯಾವುದೇ ಮ್ಯಾಜಿಸ್ಟ್ರೇಟ್‌ನ ಪೂರ್ವಾನುಮತಿ ಇಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು ಎಂದು ಹೇಳಲಾಗಿದ್ದು, ಈ ವಿಭಾಗಕ್ಕೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುವುದು ಎಂದು ಟ್ವೀಟ್ ನಲ್ಲಿ ಅವರು ತಿಳಿಸಿದ್ದಾರೆ.
ಇದು ದುರುಪಯೋಗವಾಗಲಿದೆ ಎಂದು ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವವವರನ್ನು ಹತ್ತಿಕ್ಕಲು ಮಾಡುತ್ತಿರುವ ಕುತಂತ್ರ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆಯೆಂದು ಕರೆಯಲ್ಪಡುವ ಈ ವಿಶೇಷ ಪಡೆಯನ್ನು ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡ, ಮೆಟ್ರೋ, ಬ್ಯಾಂಕ್‌ ಮತ್ತು ಇತರ ಸರಕಾರಿ ಕಚೇರಿಗಳನ್ನು ರಕ್ಷಿಸಲು ಬಳಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ತನ್ನ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

ಯೋಗಿ ಆದಿತ್ಯನಾಥ್‌ ಸರಕಾರದ ಈ ನಿರ್ಧಾರ ದುರುಪಯೋಗವಾಗಬಹುದು ಎಂದು ರಾಜಕೀಯ ವಿಶ್ಲೇಷಕರು, ಕಾನೂನು ತಜ್ಞರು ಟೀಕಿಸಿದ್ದಾರೆ. ಅನೇಕರ ಟೀಕೆಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಯುಪಿಎಸ್ಎಸ್ಎಫ್‌ಗೆ ನೀಡಲಾಗುವ ಅಧಿಕಾರಗಳು ಸಿಐಎಸ್ಎಫ್‌ ಮಾದರಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group