ರಾಷ್ಟ್ರೀಯ ಸುದ್ದಿ

ಸುದರ್ಶನ್ ಚಾನೆಲಿನ ‘UPSC ಜಿಹಾದ್’ ಕಾರ್ಯಕ್ರಮಕ್ಕೆ ಸುಪ್ರೀಮ್ ಕೋರ್ಟ್ ತಡೆ

► ಮತಾಂಧ ಪತ್ರಕರ್ತ ಸುರೇಶ್ ಚಾವಂಕೆ ಮತ್ತು ಅನುಮತಿ ನೀಡಿದ್ದ ಕೇಂದ್ರ ಸರಕಾರಕ್ಕೆ ಮುಖಭಂಗ

ನಾಗರಿಕ ಸೇವಾ ಪರೀಕ್ಷೆಗಳಲ್ಲಿ (UPSC)  ಅರ್ಹತೆ ಪಡೆದ ಪ್ರತಿಭಾವಂತ ಮುಸ್ಲಿಮ್ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ‘UPSC ಜಿಹಾದ್’ ಎಂಬ ಕಾರ್ಯಕ್ರಮ ಪ್ರಸಾರಿಸಲು ಯೋಜಿಸಿದ್ದ ಸುದರ್ಶನ್ ಚಾನೆಲಿನ ಮತಾಂಧ ಪತ್ರಕರ್ತ ಸುರೇಶ ಚಾವಂಕೆಯ ಕಾರ್ಯಕ್ರಮಕ್ಕೆ ಮೂರು ಸದಸ್ಯರ ಸುಪ್ರೀಂ ಕೋರ್ಟ್ ಪೀಠ ತಡೆ ವಿಧಿಸಿದೆ. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡುವ ಕಾರ್ಯಕ್ರಮವಾಗಿದೆ ಎಂದು ಪೀಠ ಹೇಳಿದೆ . ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮುಸ್ಲಿಮರು ‘ನುಸುಳು’ತ್ತಿದ್ದಾರೆ ಎಂದು ಹೇಳಲು ನಿಮಗೆ ನಾವು ಅನುಮತಿಸುವುದಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತು. ಮುಂದಿನ ಆದೇಶದ ವರೆಗೆ ಚಾನೆಲ್ ತನ್ನ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಮುಂದಿನ ಹಂತಗಳನ್ನು  ಪ್ರಸಾರ ಮಾಡದಂತೆ ತಡೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದು ಮಲ್ಹೋತ್ರಾ ಮತ್ತು ಕೆ.ಎಂ.ಜೋಸೆಫ್ ಅವರ ನ್ಯಾಯಪೀಠವು ಮಂಗಳವಾರ ರಾತ್ರಿ ನಿಗದಿಯಾಗಿದ್ದ ಕಾರ್ಯಕ್ರಮದ ಮುಂದಿನ ವಿಭಾಗದ ಪ್ರಸಾರವನ್ನು ಮುಂದೂಡಲು ಚಾನೆಲ್‌ಗೆ ಸೂಚಿಸಿತು.  ಮತಾಂಧ ಪತ್ರಕರ್ತ ಸುರೇಶ್ ನ ಈ ಕಾರ್ಯಕ್ರಮ ಮುಸ್ಲಿಮರನ್ನು ನಿಂದಿಸಲು ಮಾಡಲಾಗಿದೆ ಎಂದು ಕೋರ್ಟ್ ಹೇಳಿತು. ನಿಮ್ಮ ಈ ಕಾರ್ಯಕ್ರ,ಮ, ನಾಗರಿಕ ಸೇವೆಯಲ್ಲಿ ಮುಸ್ಲಿಮರು ಪಾಸಾಗುತ್ತಿರುವುದು ಒಂದು ಪಿತೂರಿಯ ಭಾಗವಾಗಿ ಎಂದು ಅವರನ್ನು ಚಿತ್ರಿಸುವ ಕಪಟ ಪ್ರಯತ್ನದಂತೆ ತೋರುತ್ತಿದೆ. ಇದು ಮುಸ್ಲಿಮರನ್ನು ನಿಂದಿಸಿ ಅವರನ್ನು ಕೆರಳಿಸುವ ಯತ್ನದಂತೆ ನ್ಯಾಯಾಲಯಕ್ಕೆ ತೋರುತ್ತಿದೆ” ಎಂದು ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠ ಹೇಳಿದೆ.

ಈ ಮತಾಂಧ ಪತ್ರಕರ್ತ ಸುರೇಶ್ ಚಾವಂಕೆ ಗೂಂಡಾಗಳಂತೆ ಹಲವು ರೀತಿಯ ಆಯುಧಗಳನ್ನು ಪ್ರದರ್ಶಿಸಿ ಫೋಟೋ ತೆಗೆಸಿಕೊಳ್ಳುವ ಮಾನಸಿಕತೆ ಹೊಂದಿದ್ದು, ತನ್ನ ಮಗನಿಗೂ ಒಮ್ಮೆ ಬಂದೂಕು ನೀಡುವ ಫೋಟೋ ವೈರಲ್ ಆಗಿತ್ತು. ತನ್ನ ಕಚೇರಿಯಲ್ಲಿನ ಮಹಿಳೆಯರಿಗೂ ಸೇರಿದಂತೆ ಎಲ್ಲರ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ ಫೋಟೋ ತೆಗೆಸಿಕೊಂಡಿದ್ದು ಕೂಡಾ ಹಿಂದೊಮ್ಮೆ ವೈರಲ್ ಆಗಿತ್ತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group