ರಾಷ್ಟ್ರೀಯ ಸುದ್ದಿ

ನ್ಯಾಯಾಂಗ ನಿಂದನೆ; ಒಂದು ರೂಪಾಯಿ ದಂಡ ಪಾವತಿಸಿದ ಪ್ರಶಾಂತ್ ಭೂಷಣ್

ವರದಿಗಾರ (ಸೆ.14): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟಿರುವ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಸೋಮವಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ರೂಪಾಯಿ ದಂಡ ಪಾವತಿಸಿದರು.

ದಂಡ ಪಾವತಿಸಿದ ನಂತರ ಮಾತನಾಡಿದ ಅವರು, ತಾವು ನ್ಯಾಯಾಲಯ ತೀರ್ಪನ್ನು ಸ್ವಾಗತಿಸುವುದಿಲ್ಲ. ನ್ಯಾಯಾಲಯ ನಿಂದನೆಗಾಗಿ ತಮಗೆ ಒಂದು ರೂಪಾಯಿ ದಂಡ ವಿಧಿಸಿರುವ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದೇನೆ. ದಂಡ ಪಾವತಿಸಿರುವುದರಿಂದ ತಾವು ತೀರ್ಪನ್ನು ಗೌರವಿಸಿದಂತೆ ಅಲ್ಲ. ತನಗಿರುವ ಹಕ್ಕಿನ ಪ್ರಕಾರ ತೀರ್ಪನ್ನು ಮರು ಪರಿಶೀಲಿಸಲು ಕೋರಿದ್ದೇನೆ. ತಮ್ಮ ಅರ್ಜಿಯನ್ನು ಮೊದಲಗಿಂತಲೂ ವಿಸ್ತೃತ ಹಾಗೂ ದೊಡ್ಡ ನ್ಯಾಯಪೀಠ ವಿಚಾರಣೆ ನಡೆಸಲಿ ಎಂದು ಮನವಿ ಮಾಡುತ್ತೇನೆ ಎಂದರು.

ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ 1 ರೂಪಾಯಿ ದಂಡ ವಿಧಿಸಿ ಆಗಸ್ಟ್ 31 ರಂದು ತೀರ್ಪು ನೀಡಿತ್ತು. ಸೆಪ್ಟೆಂಬರ್ 15 ರೊಳಗೆ ದಂಡ ಪಾವತಿಸಲು ವಿಫಲವಾದರೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ವಕೀಲ ವೃತ್ತಿಗೆ ಮೂರು ವರ್ಷಗಳ ನಿರ್ಬಂಧ ಹೇರುವುದಾಗಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group